Thursday, June 26, 2025

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಎಲ್ಲಾ ಇಲಾಖೆಗಳ ಸಾಮೂಹಿಕ ಪ್ರಯತ್ನದ ಅಗತ್ಯವಿದೆ: ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ

ಬಂಟ್ವಾಳ: ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕೇವಲ‌ ಶಿಕ್ಷಣ ಇಲಾಖೆಯ ಜವಬ್ದಾರಿಯಲ್ಲ. ಇಲ್ಲಿ ಎಲ್ಲಾ ಇಲಾಖೆಗಳ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ.ಹೇಳಿದರು.

ಶನಿವಾರ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬಂಟ್ವಾಳ ತಾಲೂಕು ಶಾಖೆಯ 2020-21ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ನಿವೃತ್ತ ಸರಕಾರಿ ನೌಕರರ ಮತ್ತು ಸಾಧಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಶಿಕ್ಷಣ ನೀತಿಯಲ್ಲಿ ಮೌಲ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಸಕರಾತ್ಮಕ ಚಿಂತನೆಯೊಂದಿಗೆ
ಮುಂದಿನ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಶಿಕ್ಷಕರು ಪೂರ್ಣ ಸಿದ್ದತೆ ಮಾಡಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಬಂಟ್ವಾಳ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು , ಸಂಘದ ನಿರಂತರ ಚಟುವಟಿಕೆಗಳಿಗೆ ಸದಸ್ಯರ ಸಹಕಾರ ಬೇಕು, ಸಂಘವನ್ನು ಸಂಘಟನಾತ್ಮಕ ಮಟ್ಟದಲ್ಲಿ ಗುರುತಿಸಿ ಅಧುನಿಕ ಸ್ಪರ್ಶ ನೀಡಲು ಒಂದಾಗಿ ಕೆಲಸ ಮಾಡೋಣ ಎಂದು ಹೇಳಿದರು.

ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಮಾತನಾಡಿ, ನೌಕರರ
ಸಮಸ್ಯೆಗಳಿಗೆ ಪರಿಹಾರಕ್ಕೆ ಸಂಘಟನೆ , ಸಂಘದ ಅವಶ್ಯಕತೆ ಹೆಚ್ಚಿದೆ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ದ.ಕ. ಜಿಲ್ಲಾಧ್ಯಕ್ಷ ಪಿ. ಕೆ. ಕೃಷ್ಣ, ಬಂಟ್ವಾಳ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ದ.ಕ‌.ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕಡಬ ಸಂಘದ ಅಧ್ಯಕ್ಷ ವಿಮಲ್‌ಕುಮಾರ್, ಸುಳ್ಯಸಂಘದ ಅಧ್ಯಕ್ಷ ತೀರ್ಥರಾಮ, ಬಂಟ್ವಾಳ ಪಿಂಚಣಿದಾರರ ಸಂಘದ ಅಧ್ಯಕ್ಷ ಲಯನ್ ಪಿ ಲೋಕನಾಥ್ ಶೆಟ್ಟಿ, ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಗಕ್ಷ ಪ್ರಶಾಂತ್ ಪೂಂಜಾಲಕಟ್ಟೆ , ಗೌರವ ಸಲಹೆಗಾರ ರಮೇಶ್ ನಾಯಕ್ ರಾಯಿ ಉಪಾಧ್ಯಕ್ಷ ಮಂಜುನಾಥ್, ನವೀನ್ ಪಿ.ಎಸ್, ಗಾಯತ್ರಿ ಕಂಬಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿರುವ ಪ್ರಶಾಂತ್ ಪುಂಜಾಲಕಟ್ಟೆ ಅವರನ್ನು ಸನ್ಮಾನಿಸಲಾಯಿತು

ಪ್ರಸ್ತಾವಿಕವಾಗಿ ಮಾತನಾಡಿದ ಬಂಟ್ವಾಳ ತಾಲೂಕು ಅಧ್ಯಕ್ಷ ಉಮಾನಾಥ ರೈ ಮೇರಾವು ಅತಿಥಿಗಳನ್ನು ಸ್ವಾಗತಿಸಿ,
ಕಾರ್ಯದರ್ಶಿ ಸಂತೋಷ್ ಕುಮಾರ್ ಸ್ವಾಗತಿಸಿ, ವಂದಿಸಿದರು.

More from the blog

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...