Monday, January 26, 2026

ಮಹಿಳಾ ಪ್ರಯಾಣಿಕೆ ಜೊತೆ “ಚಿಲ್ಲರೆ” ವಿಚಾರಕ್ಕಾಗಿ ಗಲಾಟೆ ಮಾಡಿದ ಬಸ್ ಕಂಡೆಕ್ಟರ್

ಬಂಟ್ವಾಳ: ಕೆ.ಎಸ್.ಆರ್ .ಟಿ.ಸಿ.ಬಸ್ ನಲ್ಲಿ ಚಿಲ್ಲರೆ ವಿಚಾರಕ್ಕೆ ಕಂಡಕ್ಟರ್ ಓರ್ವ ಮಹಿಳಾ ಪ್ರಯಾಣಿಕೆ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


‌ಬಾಗಲಕೋಟೆ ನಿವಾಸಿ ಕೆ.ಎಸ್.ಆರ್‌ಟಿಸಿ ಕಂಡೆಕ್ಟರ್ ರಾಜು ಎಂಬವರ ಮೇಲೆ ದೂರು ನೀಡಲಾಗಿದೆ.
*ಘಟನೆಯ ವಿವರ*
ಪ್ರೀತಂ ಎಂಬವರು ಮಂಗಳೂರು ಪಂಪ್ ವೆಲ್ ಎಂಬಲ್ಲಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹತ್ತಿ ಬಿಸಿರೋಡಿಗೆ ಟಿಕೆಟ್ ಪಡೆಯುತ್ತಾರೆ.
ಪ್ರತಿ ದಿನ ಇವರು ಬಸ್ ನಲ್ಲಿ ಪ್ರಯಾಣಿಸುವ ಮಹಿಳೆ ಅ ಕಾರಣಕ್ಕಾಗಿ ಟಿಕೆಟ್ ಬೆಲೆ ಕೂಡ ಗೊತ್ತಿತ್ತು . ಮಂಗಳೂರು- ಬಿಸಿರೋಡು 26 ರೂ ಟಿಕೆಟ್ ಗಾಗಿ ಅವರ ಬಳಿ ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ 106 ರೂ ನೀಡಿದ್ದಾರೆ.
ಆದರೆ ಟಿಕೆಟ್ ನೀಡಿದ ಕಂಡಕ್ಟರ್ ಚಿಲ್ಲರೆ ಕೊಡಿ ಎಂದು ಕೇಳಿದಾಗ ನನ್ನ ಬಳಿ ಚಿಲ್ಲರೆ ಇಲ್ಲ ಹಾಗಾಗಿ ‌ 106 ನೀಡಿದ್ದೇನೆ ಎಂದು ಸೌಮ್ಯವಾಗಿ ತಿಳಿಸಿದ್ದಾರೆ.
ಆದರೆ ಮಹಿಳಾ ಪ್ರಯಾಣಿಕೆಯ ಮಾತಿಗೆ ಬೆಲೆ ಕೊಡದೆ ಚಿಲ್ಲರೆ ಇಲ್ಲದೆ ಯಾಕೆ ಬರುತ್ತೀರಿ ಎಂದು ಇಲ್ಲದ ಸಲ್ಲದ ಅವ್ಯಾಚ್ಚ ಶಬ್ದಗಳಿಂದ ಬೈದು ಮಹಿಳಾ ಪ್ರಯಾಣಿಕೆಗೆ ನಿಂದನೆ ಮಾಡಿದ್ದಾನೆ,ಸಾಲದು ಎಂಬುದಕ್ಕೆ ಬಸ್ ನಲ್ಲಿರುವ ಸಹ ಪ್ರಯಾಣಿಕ ರಲ್ಲಿಯೂ ಈ ವಿಚಾರವಾಗಿ ಅನಗತ್ಯ ಮಾತುಗಳ ಮೂಲಕ ಪ್ರಯಾಣಿಕೆಯನ್ನು ನಿಂಧಿಸಿ ಬಳಿಕ ಪರಂಗಿಪೇಟೆಯಲ್ಲಿ ಬಸ್ ನಿಲ್ಲಿಸಿ ಬಲಾತ್ಕಾರವಾಗಿ ಮಹಿಳಾ ಪ್ರಯಾಣಿಕೆಯನ್ನು ಅಲ್ಲಿರುವ ಪೋಲೀಸ್ ಔಟ್ ಪೋಸ್ಟ್ ಗೆ ಕರೆದುಕೊಂಡು ಹೋಗಿದ್ದಾನೆ , ಆದರೆ ಅಲ್ಲಿ ಹೋಗಿ ನೋಡಿದಾಗ ಯಾರು ಪೋಲೀಸರು ಇಲ್ಲದ ಕಾರಣ ವಾಪಾಸು ಬಸ್ ಮೂಲಕ ಬಿಸಿರೋಡಿಗೆ ಬಂದಿದ್ದಾರೆ.
ಬಿಸಿರೋಡು ವರೆಗೂ ಚಿಲ್ಲರೆ ಕೊಡದೆ ಸತಾಯಿಸಿದ ಕಂಡೆಕ್ಟರ್ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಲ್ಲಿ ದೂರು ನೀಡಿದ್ದಾರೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...