ವಿಟ್ಲ: ರೈಲ್ವೇ ಸೇತುವೆಯ ಇಕ್ಕೆಲಗಳಲ್ಲಿ ಅಳವಡಿಸಿರುವ ಸೇಫ್ ಗಾರ್ಡ್ ಕಂಬ ಹೆದ್ದಾರಿ ಅಡ್ಡವಾಗಿ ಬಿದ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಘನ ವಾಹನಗಳು ಸೇತುವೆಗೆ ಅಪ್ಪಳಿಸದಂತೆ ಮುಂಜಾಗರೂಕತೆಯಾಗಿ ಈ ಕಂಬವನ್ನು ಅಳವಡಿಸಲಾಗುತ್ತದೆ. ಈ ಸೇಫ್ ಗಾರ್ಡ್ ಗೆ ಘನ ವಾಹನವೊಂದು ಢಿಕ್ಕಿ ಹೊಡೆದಿದೆ. ಇದರಿಂದ ಕಂಬ ಹೆದ್ದಾರಿಗೆ ಅಡ್ಡವಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಮಿತ್ತೂರು ರೈಲ್ವೇ ಸೇತುವೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿದೆ.
ಈ ಹಿಂದೆಯೂ ಹಲವು ಬಾರಿ ಈ ರೈಲ್ವೇ ಸೇಫ್ ಗಾರ್ಡ್ ಕಂಬ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು ಎನ್ನುವುದನ್ನು ಸ್ಥಳೀಯರು ಸ್ಮರಿಸಿಕೊಂಡಿದ್ದಾರೆ.