Friday, July 11, 2025

ಬರಿಮಾರು ಗ್ರಾಮ ಪಂಚಾಯತ್ ಸಿಬ್ಬಂದಿ ಮರುನಿಯುಕ್ತಿಗೊಳಿಸಿ ಆದೇಶ

ಬಂಟ್ವಾಳ:  ಬಂಟ್ವಾಳತಾಲೂಕು ಬರಿಮಾರು ಗ್ರಾಮ ಪಂಚಾಯತ್ ನ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ ಕು.ಶಾರಿಕಾ ಎಂ. ರವರನ್ನು ಅವರು ಜಿ.ಪಂ ಸದಸ್ಯರಿಗೆ, ಗ್ರಾಪಂ ಸದಸ್ಯರಿಗೆ ಗೌರವ ಕೊಡುವುದಿಲ್ಲವೆಂಬ ಆಪಾದನೆಯ ಮೇರಗೆ ಪಂಚಯತ್ ಸದಸ್ಯರಾದ ಹರಿಕೃಷ್ಣ ಮತ್ತು ಇತರರು ಸದರಿ ನೌಕರಳನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ 2017ರಲ್ಲಿ ನಿರ್ಣಯ ಕೈಗೊಂಡಿದ್ದರು. 8 ಗ್ರಾ.ಪಂ ಸದಸ್ಯರಲ್ಲಿ 5 ಜನ ನಿರ್ಣಯದ ಪರವಾಗಿದ್ದ ಕಾರಣ ಅಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ. ಗೋಕುಲದಾಸ್ ಭಕ್ತ ರವರು ಸಿಬ್ಬಂದಿಯನ್ನು ವಜಾಗೊಳಿಸಿ ಆದೇಶಿಸಿದ್ದರು. ಸದ್ರಿ ಆದೇಶವನ್ನು ಪ್ರಶ್ನಿಸಿ ಗ್ರಾ.ಪಂ ಸಿಬ್ಬಂದಿ ಕು.ಶಾರಿಕಾ ರವರು ದ.ಕ.ಜಿಲ್ಲಾ ಪಂಚಾಯತ್ ಸಿ.ಇ.ಒ ರವರಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದರು. ನೌಕರಳ ಮೇಲ್ಮನವಿಯ ವಿಚಾರಣೆ ನಡೆಸಿದ ಅಂದಿನ ಸಿ.ಇ.ಒ ಡಾ.ಎಂ.ಆರ್.ರವಿ ರವರು ಗ್ರಾಮ ಪಂಚಾಯತ್ ನೌಕರಳನ್ನು ವಜಾಗೊಳಿಸಿದ ಗ್ರಾ.ಪಂ ಆದೇಶವನ್ನು ರದ್ದು ಪಡಿಸಿದ್ದರು. ಸಿ.ಇ.ಒ ರವರ ಆದೇಶವನ್ನು ಪ್ರಶ್ನಿಸಿ ಸದಸ್ಯ ಹರಿಕೃಷ್ಣ ಮತ್ತು ಇತರರು ಕರ್ನಾಟಕ ಉಚ್ಛ ನ್ಯಾಯಾಲಯ ದಲ್ಲಿ ಮೇಲ್ಮನವಿಯನ್ನು ಸಲ್ಲಿಸಿ ಸಿ.ಇ.ಒ ರವರ ಆದೇಶಕ್ಕೆ ತಡೆಯಾಜ್ಞೆಯನ್ನು ತಂದಿದ್ದರು. ಇದರಿಂದಾಗಿ ಬರಿಮಾರಿ ಗ್ರಾ.ಪಂ ನಲ್ಲಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಇಲ್ಲದೇ ಕಳೆದ ಮೂರು ವರ್ಷಗಳಿಂದ ಸಮಸ್ಯೆ ತಲೆದೋರಿತ್ತು. ಪ್ರಸ್ತುತ ಗ್ರಾ.ಪಂ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲು ಎರಡು ತಿಂಗಳು ಬಾಕಿ ಇರುವ ಸಂಧರ್ಭದಲ್ಲಿ ಹೈಕೋರ್ಟ್ ನಲ್ಲಿ ದಾಖಲಿಸಿದ ದಾವೆಯನ್ನು ಸದಸ್ಯರಾದ ಹರಿಕೃಷ್ಣ ಮತ್ತು ಇತರರು ಏಕಾಏಕಿ ಹಿಂಪಡೆದಿರುವುದರಿಂದ ದಾವೆ ವಜಾಗೊಂಡಿರುತ್ತದೆ. ಇದರಿಂದಾಗಿ ದ.ಕ.ಜಿಲ್ಲಾ ಪಂಚಾಯತ್ ಸಿ.ಇ.ಒ ರವರ ಆದೇಶಕ್ಕೆ ಇದ್ದ ತಡೆಯಾಜ್ಞೆ ತೆರವಾಗಿರುತ್ತದೆ. ಪ್ರಸ್ತುತ ದ.ಕ.ಜಿಲ್ಲಾ ಪಂಚಾಯತ್ ರವರ ಆದೇಶದಂತೆ ಈಗಿನ ಪಂಚಾಯತ್ ಅಭಿವೃದ್ಧಿ ಆಧಿಕಾರಿ ಶ್ರೀ. ಲಕ್ಷ್ಮಣ ಹೆಚ್.ಕೆ ರವರು ಪಂಚಾಯತ್ ಸಿಬ್ಬಂದಿ ಕು.ಶಾರಿಕಾ ಎಂ. ರವರನ್ನು ಕರ್ತವ್ಯಕ್ಕೆ ಮರುನಿಯುಕ್ತಿಗೊಳಿಸಿ ಆದೇಶಿದ್ದು , ಸದರಿ ಆದೇಶದಂತೆ ಸಿಬ್ಬಂದಿ ದಿನಾಂಕ 30.04.2020 ರಂದು ಕರ್ತವ್ಯಕ್ಕೆ ವರದಿ ಮಾಡಿ ಕೊಂಡಿರುತ್ತಾರೆ.

More from the blog

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...