Friday, June 27, 2025

ನಿಮ್ಮ ಬರಹಗಳಿಗೆ ನಮ್ಮ ಅವಕಾಶ

ನಲ್ಮೆಯ ಓದುಗರೇ,
ಇಡೀ ದೇಶಕ್ಕೆ ದೇಶವೇ ಒಂದು ಬಗೆಯ ತಲ್ಲಣಕ್ಕೆ ಒಳಗಾಗಿದೆ, ದೇಶ ಮಾತ್ರವಲ್ಲ ಇಡೀ ವಿಶ್ವವೇ ಕೋರೋನ ವೈರಸ್ ನ ಅಪಾಯದಿಂದ ತತ್ತರಿಸಿದೆ.
ಇಂತಹಾ ವಿಷಮ ಕಾಲದಲ್ಲಿ ಕೊರೋನಾ ವಿರುದ್ಧ ಹೋರಾಡುವ ಸಲುವಾಗಿ ಇಡೀ ಭಾರತವೇ ಲಾಕ್ ಡೌನ್ ಆಗಿ ಅನೇಕ ದಿನಗಳೇ ಕಳೆದು ಹೋಗಿದೆ. ಇನ್ನೂ 12 ದಿನಗಳು ನಾವು ನಿಯೋಜಿತ ಲಾಕ್ ಡೌನ್ ಗೆ ಅನಿವಾರ್ಯವಾಗಿ ಹೊಂದಿಕೊಳ್ಳಬೇಕಾಗಿದೆ .
ಪ್ರತಿನಿತ್ಯ ನಮ್ಮದೇ ವ್ಯವಹಾರ, ಕೆಲಸದ ಒತ್ತಡದಲ್ಲಿ ಮುಳುಗುತ್ತಿದ್ದ ನಾವುಗಳು ಇದೀಗ ಲಾಕ್ ಡೌನ್ ಪರಿಣಾಮವಾಗಿ ಮನೆಯಲ್ಲಿಯೇ ಇಡೀ ದಿನವನ್ನು ಕಳೆಯಬೇಕಾಗಿದೆ. ವರ್ಕ್ ಫ್ರಮ್ ಹೋಮ್ ಎನ್ನುವ ಪರಿಕಲ್ಪನೆಯೂ ಸದ್ಯದ ಮಟ್ಟಿಗೆ ಮತ್ತಷ್ಟು ನಿಧಾನಗತಿಯನ್ನು ಕಾಣುತ್ತಿದೆ. ಇಂತಹಾ ಸನ್ನಿವೇಶದಲ್ಲಿ ಮುಂದೇನು ಎನ್ನುವ ಕ್ಷಣ ಕ್ಷಣದ ಆತಂಕದಲ್ಲಿಯೇ ನಾವು ದಿನಕಳೆಯುತ್ತಿದ್ದೇವೆ. ಕೊರೋನಾ ವೈರಸ್ ನ ನಿಗ್ರಹಕ್ಕೆ ಸರ್ಕಾರ, ಆರೋಗ್ಯ ಇಲಾಖೆ, ಆಡಳಿತ ವ್ಯವಸ್ಥೆ ಜಾರಿಗೊಳಿಸುವ ಎಲ್ಲಾ ಕಾರ್ಯಕ್ರಮ ಯೋಜನೆಗಳ ಅನುಷ್ಠಾನಕ್ಕೆ ನಾವೆಲ್ಲರೂ ನಮ್ಮ ಬೆಂಬಲ ನೀಡೋಣ ಎನ್ನುವ ಕರೆ ನೀಡುತ್ತಲೇ “ನಮ್ಮ ಬಂಟ್ವಾಳ” ನಿಮ್ಮ ಮುಂದೆ ಹೊಸ ಯೋಚನೆಯನ್ನು ಪ್ರಸ್ತಾಪಿಸುತ್ತಿದೆ.
ಇದುವೇ “ಲಾಕ್ ಡೌನ್ ಸಾಹಿತ್ಯ” ಸಾಮಾಜಿಕವಾಗಿ ಬೆರೆಯುವ ನಾವೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಮನೆಯೊಳಗೆ ಬಂಧಿಯಾಗಿದ್ದೇವೆ. ಆದರೆ ನಮ್ಮೊಳಗಿನ ವಿಚಾರಧಾರೆಗಳಿಗೆ ಈ ಲಾಕ್ ಡೌನ್ ನ ಸಂದರ್ಭವನ್ನೇಕೆ ಬಳಸಿಕೊಳ್ಳಬಾರದು..? ಎನ್ನುವ ಪ್ರಶ್ನೆ ಬಂದಾಗ ಹುಟ್ಟಿಕೊಂಡ ಯೋಚನೆಯೇ “ಲಾಕ್ ಡೌನ್ ಸಾಹಿತ್ಯ”. ನಾವೇನು ಮಾಡಬಹುದು ಎನ್ನುವ ಮನಸುಗಳಿಗೆ ಹೊಸದೊಂದು ಹೊಳಹನ್ನು ನೀಡುತ್ತಿದ್ದೇವೆ. ಈ‌ ಲಾಕ್ ಡೌನ್ ಅವಧಿಯಲ್ಲಿ‌ ನೀವು ಬರೆಯುವ ಬರಹಗಳಿಗೆ ನಾವೊಂದು ಅವಕಾಶ ಕಲ್ಪಿಸುತ್ತಿದ್ದೇವೆ. ನೀವು ಹೊಸದಾಗಿ ಬರೆದ ಅನಿಸಿಕೆ, ಅನುಭವ, ಸಣ್ಣಕತೆ, ಕವನ ಹಾಗೂ ಚುಟುಕು ಗಳನ್ನು ನಮಗೆ ಕಳುಹಿಸಿಕೊಡಿ.ಅದು ಮತ್ತಷ್ಟು ಮಂದಿಗೆ ಪ್ರೇರಣೆಯಾಗುವುದರ‌ ಜೊತೆಗೆ ನಿಮ್ಮೊಳಗಿನ ಕವಿಮನಸ್ಸನ್ನು ಮತ್ತಷ್ಟು ಜಾಗೃತಗೊಳಿಸಿದರೆ ಅದಷ್ಟೇ ಸಾಕು. ಮತ್ತೇಕೆ ತಡ.. ಈಗಲೇ ಬರೆಯಲು ಆರಂಭಿಸಿ.. ಅದಕ್ಕೂ ಮುನ್ನ ಈ ಕೆಳಗಿನ ಸೂಚನೆಗಳನ್ನು ಗಮನಿಸಿ..

1. ಲಾಕ್ ಡೌನ್ ಸಾಹಿತ್ಯ ಎಂದರೆ ಅದು ಸಾಹಿತ್ಯದ ಯಾವುದೇ ಪ್ರಕಾರವಲ್ಲ. ಲಾಕ್ ಡೌನ್ ಅವಧಿಯಲ್ಲಿ ಸೃಷ್ಟಿಯಾದ ಸಾಹಿತ್ಯ ಎಂದು ಪರಿಗಣಿಸುತ್ತೇವೆ.

2. ನಿಮ್ಮ ಬರಹಗಳು ಕೊರೋನಾ ನಿಗ್ರಹಕ್ಕೆ ಪ್ರೇರಣೆಯಾಗಿರಲಿ, ಜೊತೆಗೆ ಇತರ ಸಾಹಿತ್ಯಾತ್ಮಕ ಬರಹಗಳಿಗೂ ಅವಕಾಶವಿದೆ.

3. ಯಾವುದೇ ಬರಹಗಳೂ ಪದಗಳ ಮಿತಿಯಲ್ಲಿರಲಿ. ಆಯ್ದ ಬರಹಗಳನ್ನು ಮಾತ್ರ ನಾವು ಪ್ರಕಟಿಸುತ್ತೇವೆ.

4.ನಿಮ್ಮ ಬರಹಗಳು ಯುನಿಕೋಡ್ ಅಥವಾ ನುಡಿ ರೂಪದಲ್ಲಿರಲಿ, ಅಕ್ಷರ ತಪ್ಪುಗಳು ಇಲ್ಲದ ಹಾಗೆ ಕಳುಹಿಸಿ.

5.ಯಾವುದೇ ರೀತಿಯ ಕೃತಿಚೌರ್ಯ ಬೇಡ. ನಿಮ್ಮ ಬರಹ ಈ ಲಾಕ್ ಡೌನ್ ಅವಧಿಯಲ್ಲೇ ಸೃಷ್ಟಿಯಾಗಿರಬೇಕು, ಜೊತೆಗೆ ಮತ್ತಷ್ಟು ಮಂದಿಗೆ ಪ್ರೇರಣೆಯಾಗುವಂತಿರಲಿ.

6. ನಿಮ್ಮ ಬರಹಗಳನ್ನು ಈ ಕೆಳಗಿನ ನಂಬರ್ ಗೆ ವಾಟ್ಸಾಪ್ ಮಾಡಿ. 9449664578, 9481017606

More from the blog

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...