ಬಂಟ್ವಾಳ: ಎ.18 ರಂದು ನಡೆಯುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಎ.16 ರ ಸಂಜೆಯಿಂದ ಎ.18 ರ ವರೆಗೆ ಎಲ್ಲಾ ವೈನ್ ಶಾಪ್ ಗಳು, ಬಾರ್ ಗಳು ಬಂದ್.
ಇದು ಚುನಾವಣೆಯ ಸಂದರ್ಭದಲ್ಲಿ ಪ್ರತಿಬಾರಿಯೂ ಇಲಾಖಾ ಆದೇಶವಾಗಿರುತ್ತದೆ. ಆದರೆ ಇಲ್ಲೊಂದು ಕೈ ಬರಹದಲ್ಲಿ ಬರೆದು ಗೊಡೆಗೆ ಅಂಟಿಸಿದ ಪೋಟೋ ಮಾತ್ರ ಸಖತ್ ವೈರಲ್ ಆಗುತ್ತಿದೆ.
16-4-19 ರ ಸಂಜೆ 6 ಗಂಟೆ ಯಿಂದ 18-4-19 ರ ತನಕ *ಬಾರ್ ಬಂದ್* 19-4-19 ಕ್ಕೆ OPEN ಇದೆ .

ಸೂಚನೆ: ಕುಡಿಯದೆ ಬದುಕಲು ಸಾಧ್ಯವಿಲ್ಲದವರು 2 ದಿನಕ್ಕೆ ಬೇಕಾಗುವಷ್ಟು ಇಂದೇ ಕುಡಿಯಬೇಕಾಗಿ ವಿನಂತಿ. ಎಂದು ವೈಟ್ ಶೀಟ್ ನಲ್ಲಿ ಕೈ ಬರಹದಲ್ಲಿ ಬರೆದು ಗೊಡೆಗೆ ಅಂಟಿಸಿದ ಚೀಟಿಯ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.