Saturday, January 31, 2026

ಏಕಕಾಲದಲ್ಲಿ ಮೂರು ಕಡೆಗಳಲ್ಲಿ ಪೊಲೀಸರ ಕಾರ್ಯಚರಣೆ

ದ.ಕ.ಜಿಲ್ಲೆಯ ಬಂಟ್ವಾಳದಲ್ಲಿ ದಿನದಿಂದ ದಿನಕ್ಕೆ ಕೊರೊನ ಪಾಸಿಟಿವ್ ಪ್ರಕರಣದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದರೂ, ಕೂಡಾ ಅನಗತ್ಯ ತಿರುಗಾಟ ನಡೆಸುವವರ ಸಂಖ್ಯೆ ಕಡಿಮೆಯಾಗಿಲ್ಲ, ಪೊಲೀಸರು  ಕಾರ್ಯಚರಣೆ ನಡೆಸಿ ವಾಹನಗಳ ವಶಕ್ಕೆ ಪಡೆಯುವ ಕಾರ್ಯಕ್ಕೆ ರೆಸ್ಟ್ ಕೂಡಾ ಸಿಕ್ಕಲ್ಲ.
ಕೊರೊನಾ ಪಾಸಿಟಿವ್ ಹೆಚ್ಚಾಗುತ್ತಿದ್ದರೂ ಕೂಡ ಬಂಟ್ವಾಳದ ಜನತೆಗೆ ಬುದ್ಧಿ  ಬರಲಿಲ್ಲ.
ಅನಗತ್ಯವಾಗಿ ತಿರುಗಾಟ ನಡೆಸುವುದರ ಜೊತೆಗೆ ಪೊಲೀಸರ ನೆಮ್ಮದಿಗೂ ಕಗ್ಗಂಟಾಗಿದ್ದಾರೆ.
ಮನೆಯಲ್ಲಿಯೇ ಇರಿ, ಸೇಫ್ ಅಗಿರಿ ಎಂದು ಎಷ್ಟು ಹೇಳಿದರೂ ಅನಾವಶ್ಯಕ ತಿರುಗಾಟ ನಡೆಸುವುದು ಹೆಚ್ಚಾಗುತ್ತಲೆ ಇದೆ.
ಹಾಗಾಗಿ ಇಂತವರ ನಿಯಂತ್ರಣಕ್ಕೆ ಬಂಟ್ವಾಳ ಡಿ.ವೈ.ಎಸ್. ಪಿ.ವೆಲಂಟೈನ್ ನಿರ್ದೇಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ತಂಡ ಇಂದು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದೆ.
ಈ ಹಿಂದೆಗಿಂತಲೂ ಹೆಚ್ಚು ಕಠಿಣವಾಗಿ ತಪಾಸಣೆ ಮಾಡಿ ವಾಹನಗಳ ಸಂಚಾರಕ್ಕೆ ತಡೆ ನೀಡಿದ್ದಾರೆ.

ಬಂಟ್ವಾಳ : ಸರಕಾರದ ಲಾಕ್‌ಡೌನ್ ಆದೇಶದ ನಡುವೆಯೂ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದವರಿಗೆ ಶನಿವಾರ ಪೊಲೀಸರು ಏಕಕಾಲದಲ್ಲಿ ಮೂರು ಕಡೆ ಕಾರ್ಯಾಚರಣೆ ನಡೆಸಿ ಬಿಸಿ ಮುಟ್ಟಿಸಿದ್ದಾರೆ.


ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದಲ್ಲಿ ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್ ಅವರ ನೇತೃತ್ವದಲ್ಲಿ, ಉಳಿದಂತೆ ಬಿ.ಸಿ.ರೋಡು ಜಂಕ್ಷನ್‌ನಲ್ಲಿ ಮಂಗಳೂರು ಕಡೆಯಿಂದ ಆಗಮಿಸಿದ ವಾಹನಗಳನ್ನು ಅಪರಾಧ ವಿಭಾಗದ ಪಿಎಸ್‌ಐ ಸಂತೋಷ್ ಅವರ ನೇತೃತ್ವದಲ್ಲಿ ಹಾಗೂ ಮೆಲ್ಕಾರ್‌ನಲ್ಲಿ ಸಂಚಾರಿ ಠಾಣಾ ಪಿಎಸ್‌ಐಗಳಾದ ರಾಜೇಶ್ ಕೆ.ವಿ. ಹಾಗೂ ರಾಮ ನಾಯ್ಕ್ ಅವರು ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

ಪ್ರತಿ ವಾಹನಗಳನ್ನು ತಡೆದು ವಿಚಾರಣೆ ನಡೆಸಿದ ಪೊಲೀಸರು ಅಗತ್ಯ ಸಾಗಾಟದ ವಾಹನಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಒಬ್ಬರೇ ಓಡಾಟ ನಡೆಸಬೇಕು, ಆಟೋ, ಖಾಸಗಿ ವಾಹನಗಳಲ್ಲಿ ಹಿಂಬದಿ ಒಬ್ಬರಿಗೆ ಮಾತ್ರ ಎಂಬ ಆದೇಶವಿದ್ದರೂ ಜನರು ಅದನ್ನು ಉಲ್ಲಂಘನೆ ಮಾಡಿ ತಿರುಗಾಡುತ್ತಿದ್ದರು.

ಶನಿವಾರ ಬೆಳ್ಳಂ ಬೆಳಗ್ಗೆಯೇ ಕಾರ್ಯಾಚರಣೆ ನಡೆಸಿದ ಪೊಲೀಸರು ಅಗತ್ಯ ಸಾಮಾಗ್ರಿಗಳ ಖರೀದಿ ನೆಪದಲ್ಲಿ ತಿರುಗಾಡುತ್ತಿದ್ದರಿಗೆ ಕಾನೂನಿನ ಬಿಸಿ ಮುಟ್ಟಿಸಿದ್ದಾರೆ. ಬಿ.ಸಿ.ರೋಡು ನಾರಾಯಣ ಗುರು ವೃತ್ತದ ಬಳಿ ಹೆಚ್ಚಿನ ವಾಹನಗಳನ್ನು ವಿಚಾರಣೆ ನಡೆಸಲಾಗಿದೆ.

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...