ಬಂಟ್ವಾಳ: ಇಲ್ಲಿಯ ನಿತ್ಯಾನಂದನಗರದಲ್ಲಿರುವ ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮಿ ಮಂದಿರದಲ್ಲಿ ಫೆ.11 ರಿಂದ ಫೆ.15 ವೇದಮೂರ್ತಿ ಶ್ರೀ ಸತ್ಯನಾರಾಯಣ ಭಟ್ ಶಿವಕ್ಷೇತ್ರ ಇಜ್ಜ ಅವರ ನೇತೃತ್ವದಲ್ಲಿ ಶ್ರೀಗೋವಿಂದ ಸ್ವಾಮೀಜಿಯವರ ಮಹಾಸಮಾಧಿಯ 30ನೇ ವರ್ಷದ ಆರಾಧನ ಮಹೋತ್ಸವ, ಸಾಮೂಹಿಕ ಮಹಾ ರುದ್ರಯಾಗ, ಶ್ರೀ ಸದ್ಗುರು ನಿತ್ಯಾನಂದ, ಗೋವಿಂದ ಸ್ವಾಮೀಜಿಯವರ ಪ್ರಥಮ ವರ್ಷದ ವಿಗ್ರಹ ಪ್ರತಿಷ್ಠಾ ವರ್ಧಂತಿ ಉತ್ಸವ ಹಾಗೂ 51ನೇ ವಾರ್ಷಿಕ ಭಜನಾ ಮಹೋತ್ಸವವು ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆಎಂದು ಮಂದಿರದ ಆಡಳಿತ ಸಮಿತಿ ಅಧ್ಯಕ್ಷಬಿ. ದಿನೇಶ್ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆ.11ರಂದು ಬೆಳಿಗ್ಗೆ ಪ್ರಾತಃ ಪೂಜೆಯ ಬಳಿಕದೇವತಾ ಪ್ರಾರ್ಥನೆ, ಗಣಪತಿ ಹವನ ಶ್ರೀ ಸದ್ಗುರು ಗೋವಿಂದ ಸ್ವಾಮೀಜಿಯವರ ಮಹಾಸಮಾಧಿಯ 30ನೇ ವರ್ಷದ ಆರಾಧನ ಮಹೋತ್ಸವ ಪ್ರಯುಕ್ತ ಭಜನಾ ಸಂಕೀರ್ತನೆ, ಮಹಾನಿರ್ವಾಣ ಸಮಯ ವಿಶೇಷ ಪೂಜೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ
12 ರಂದು “ಸಾಮೂಹಿಕ ಮಹಾರುದ್ರಯಾಗ” ಮಧ್ಯಾಹ್ನ 12-00ಕ್ಕೆ: ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ 3 ರಿಂದ ರಾತ್ರಿ 8 ರ ತನಕ : ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ,ರಾತ್ರಿ ಅನ್ನಸಂತರ್ಪಣೆ
ಫೆ. 13 ರಂದು ಬೆಳಿಗ್ಗೆ ಪ್ರಾತಃ ಪೂಜೆ, 10-00ರಿಂದ ಸಂಜೆ 4 ರವರೆಗೆ ವಿವಿಧ ಭಜನಾ ತಂಡಗಳಿಂದ “ಭಜನಾ ಸಂಕೀರ್ತನೆ,ಸಂಜೆ 5 ರಿಂದ : ದುರ್ಗಾನಮಸ್ಕಾರ ಪೂಜೆ ಆರಂಭ.
14 ರಂದು “ವಸಂತ ಪಂಚಮಿ”
ಬೆಳಿಗ್ಗೆ ಪ್ರಾತಃ ಪೂಜೆ, ನವಕ ಕಲಶ ಸ್ಥಾಪನೆ ಬೆಳಿಗ್ಗೆ 8 ರಿಂದ 10 ರ ವರೆಗೆ ಶ್ರೀ ಸದ್ಗುರು ನಿತ್ಯಾನಂದ ,ಗೋವಿಂದ ಸ್ವಾಮೀಜಿಯವರ ವಿಗ್ರಹಕ್ಕೆ ಭಕ್ತಾಧಿಗಳಿಂದ “ಸೀಯಾಳಾಭಿಷೇಕ” ಬಳಿಕಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 12-30ರಿಂದ ಅಲಂಕಾರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ,ಸಂಜೆ 6 ರಿಂದ 7-30 ರವರೆಗೆ ಭಜನೆ, ನಂತರ ನಗರ ಭಜನೆ ಹೊರಡುವುದು,
ರಾತ್ರಿ 12ರಿಂದ ಮಹಾಪೂಜೆ, ಗುರುಪೂಜೆ,
ಬೆಳಿಗ್ಗೆ 6 ಕ್ಕೆ : ಭಜನಾ ಮಂಗಲೋತ್ಸವ ನಂತರ ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.