ಬಂಟ್ವಾಳ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಲಾರಿ ಚಾಲಕ ಸಮೀರ್ ಹಾಗೂ ಲಾರಿ ಮಾಲಕ ಹಮೀದ್ ಎಂಬವರನ್ನು ವಶಕ್ಕೆ ಪಡೆದುಕೊಂಡು, ಲಾರಿ ಮತ್ತು ಮರಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ವಶಪಡಿಸಿಕೊಂಡ ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ರೂ 5 ಲಕ್ಷ, ಹಾಗೂ ಮರಳಿನ ಅಂದಾಜು ಮೌಲ್ಯ ರೂ 5000/- ಆಗಬಹುದು ಎಂದು ಹೇಳಲಾಗಿದೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಮೂರ್ತಿ ಅವರು ಸಿಬ್ಬಂದಿಗಳ ಜೊತೆ ಕರ್ತವ್ಯ ದಲ್ಲಿದ್ದ ವೇಳೆ ಮಣಿಹಳ್ಳ ಕಡೆಗೆ ಟಿಪ್ಪರ್ ಲಾರಿಯೊಂದು ಬರುವುದನ್ನು ಕಂಡು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಲಾರಿಯಲ್ಲಿ ಮರಳು ತುಂಬಿದ್ದುದನ್ನು ಕಂಡು ಪರವಾನಿಗೆಯ ಬಗ್ಗೆ ವಿಚಾರಿಸಿದಾಗ ಅಕ್ರಮವಾಗಿ ವಳಚ್ಚಿಲ್ ಹೊಳೆ ಬದಿಯಲ್ಲಿ ಮರಳು ಧಕ್ಕೆಯಲ್ಲಿ ಲೋಡು ಮಾಡಿರುವುದಾಗಿ ತಿಳಿದುಬಂದಿದೆ.