ಯಾವುದೇ ಪರವಾನಿಗೆ ಇಲ್ಲದೇ ಆಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಾಲಕರಾದ ಸರ್ಫರಾಜ್ ಅಹಮ್ಮದ್ ,ಕಿರಣ್,ಮೊಹಮ್ಮದ್ ಇಸ್ಮಾಯಿಲ್ ಯಾನೆ ರಶೀದ್ ಹಾಗೂ ಮಾಲಕರಾದ ಅಬ್ದುಲ್ ಅಜೀಜ್ ಅವಿಲ್ ಕ್ರಾಸ್ಟಾ, ಮೊಹಮ್ಮದ್ ಆರೀಫ್, ಲಾರಿಗಳಿಗೆ ಮರಳು ಸರಬರಾಜು ಮಾಡಿದ ವಳಚ್ಚಿಲ್ ನ ಸತ್ತಾರ್ ಮತ್ತು ಅಜರುದ್ದೀನ್ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎರಡು ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ತಲಾ 10 ಲಕ್ಷ ರೂಪಾಯಿ ಹಾಗೂ ಸುಮಾರು 3,500 ರೂಪಾಯಿ ಮೌಲ್ಯದ ತಲಾ 03 ಯುನಿಟ್ ಮರಳನ್ನು ಹಾಗೂ ಇನ್ನೊಂದು ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ತಲಾ 4 ಲಕ್ಷ ರೂಪಾಯಿ ಹಾಗೂ ಸುಮಾರು 3,500 ರೂಪಾಯಿ ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಬಂಟ್ವಾಳ ಪೋಲೀಸರು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು ರಾಮಕೃಷ್ಣ ಹಾಗೂ ಸಿಬ್ಬಂದಿ ಉಮೇಶ, ಗೋಪಾಲ ಅವರ ಜೊತೆಯಲ್ಲಿ ರೌಂಡ್ಸ್ ನಲ್ಲಿದ್ದ ವೇಳೆ ಟಿಪ್ಪರ್ ಲಾರಿಗಳಲ್ಲಿ ಮರಳನ್ನು ಕಳವು ಮಾಡಿಕೊಂಡು ತುಂಬಿಸಿಕೊಂಡು ಬ್ರಹ್ಮರಕೋಟ್ಲು, ತಲಪಾಡಿ ಮಾರ್ಗವಾಗಿ ಬಿ.ಸಿ.ರೋಡ್ ಕಡೆಗೆ ಬರುತ್ತಿರುವ ಖಚಿತ ಮಾಹಿತಿ ಆಧಾರದಲ್ಲಿ ದಾಳಿ ನಡೆಸಿದ್ದಾರೆ.