ಬಂಟ್ವಾಳದ ರಿಕ್ಷಾ ಭವನದಲ್ಲಿ ನಡೆದ ರಿಕ್ಷಾ ಡ್ರೈವರ್ಸ್ ಅಸೋಸಿಯೇಶನ್ (ರಿ.) 48ನೇ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರಾದ ರಾಜೇಶ್ ಬೊಳ್ಳುಕಲ್ಲು ಉದ್ಘಾಟಿಸಿ ಮಾತಾಡಿ ರಿಕ್ಷಾ ಡ್ರೈವರ್ಸ್ ಗಳ ಸಾಧನೆಯನ್ನು ಬನ್ನಿಸಿದರು.

ಸಮಾಜದಲ್ಲಿ ರಿಕ್ಷಾಡ್ರೈವರ್ಸ್ಗಳ ಕೊಡುಗೆ ಅಪಾರ ಏಂದು ಹೇಳಿದ ಅವರು ಸಂಘದ ಅಭಿವೃದ್ದೀಯಲ್ಲಿ ಸದಸ್ಯರ ಶ್ರಮ ಮುಖ್ಯವಾದುದು ಎಂದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ ಸಿ ರೋಡಿನ ಖ್ಯಾತ ವಕೀಲರದ ಹೇಮಚಂದ್ರ ರವರು ಮಾತನಾಡಿ ರಿಕ್ಷಾ ಚಾಲಕರಿಗೆ ಕಾನೂನಿನ ಹರಿಯುವ ಮೂಡಿಸಿದರು.
ನಂತರ ಮಾತನಾಡಿದ ಸಂಘದ ಉಪಾಧ್ಯಕ್ಷರದ ಹುಸೈನ್ ಬಿ ರವರು ಸದಸ್ಯರಿಗೆ ಕಿವಿಮಾತು ಹೇಳಿದರು ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಹಾಗೂ ಖಜಾಂಜಿ ಕೃಷ್ಣಪ್ಪ ರವರು ಉಪಸ್ಥಿತರಿದ್ದರು.
ಸಂಘದಲ್ಲಿ ದುಡಿದ ಹಿರಿಯ ರಿಕ್ಷಾ ಚಾಲಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್ ಸ್ವಾಗತಿಸಿದರು, ಉಸ್ಮಾನರವರು ವಂದಿಸಿದರು.