ಬಂಟ್ವಾಳ: ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಕೊಡುಗೆಯಾಗಿ ನೀಡಲಿರುವ ಬ್ರಹ್ಮರಥ ಮಂಗಳವಾರ ಕದ್ರಿಯಿಂದ ಆಗಮಿಸಿದ ಬ್ರಹ್ಮ ರಥವನ್ನು ಬಿ.ಸಿ.ರೋಡಿನ ಕೈಕಂಬದಲ್ಲಿ ಅದ್ದೂರಿಯಿಂದ ಸ್ವಾಗತಿಸಲಾಯಿತು.
ಬಂಟ್ವಾಳ ತುಳುಕೂಟ, ಶ್ರೀರಕ್ತೇಶ್ವರಿ ದೇವಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಬಿ.ಸಿ.ರೋಡ್ ಜಂಕ್ಷನ್‌ನಲ್ಲಿ ಅದ್ದೂರಿಯಾಗಿ ಸ್ವಾಗತಿಸಿ, ಬೀಳ್ಕೊಡಲಾಯಿತು. ಇದೇ ವೇಳೆ ರಥಕ್ಕೆ ಬೃಹದಾಕಾರದ ಹೂವಿನ ಮಾಲೆಯನ್ನು ಸಮಿರ್ಪಿಸಲಾಯಿತು. ತುಳುಕೂಟದ ವತಿಯಿಂದ ಚೆಂಡೆ, ಪೂರ್ಣಕುಂಭದಿಂದ ಸ್ವಾಗತಿಸಲಾಯಿತು.



ಈ ಸಂದರ್ಭ ತುಳುಕೂಟದ ಗೌರವಾಧ್ಯಕ್ಷ ಎ.ಸಿ, ಭಂಡಾರಿ, ಅಧ್ಯಕ್ಷ ಸುದರ್ಶನ್ ಜೈನ್, ಕಾರ್ಯದರ್ಶಿ ಎಚ್.ಕೆ.ನಯನಾಡು, ಸರಪಾಡಿ ಆಶೋಕ ಶೆಟ್ಟಿ, ಮುರಳೀಧರ ಶೆಟ್ಟಿ, ಸೀತಾರಾಮ ಶೆಟ್ಟಿ ಕಾಂತಾಡಿ, ಮಂಜು ವಿಟ್ಲ, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾನಂದ ಶೆಟ್ಟಿ, ನಾರಾಯಣ ಸಿ.ಪೆರ್ನೆ, ಸುಕುಮಾರ್ ಕುಲಾಲ್, ಪ್ರವೀಣ.ಬಿ., ಉದ್ಯಮಿ ರಾಕೇಶ್ ಮಲ್ಲಿ, ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಸಮಿತಿಯ ರಾಜೇಶ್ ಎಲ್.ನಾಯಕ್, ಲೋಕನಾಥ ಶೆಟ್ಟಿ, ಬಿ.ಮೋಹನ್, ಸತೀಶ್ ಭಂಡಾರಿ, ರಾಜೇಶ್ ಬಿ.ಸಿ.ರೋಡ್, ಶಿವಶಂಕರ್ ಬಿ.ಸಿ.ರೋಡ್, ವಕೀಲ ಆಶ್ವನಿಕುಮಾರ್ ರೈ, ಉಮೇಶ್, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ದೇವದಾಸ ಶೆಟ್ಟಿ, ರಾಮದಾಸ್ ಬಂಟ್ವಾಳ, ಚೆನ್ನಪ್ಪ ಆರ್. ಕೋಟ್ಯಾನ್, ಪ್ರಮೋದ್ ಕುಮಾರ್ ಅಜ್ಜಿಬೆಟ್ಟು, ಪುಪ್ಪರಾಜ್ ಚೌಟ, ರಮಾನಾಥ ರಾಯಿ,ಗಣೇಶ್ ರೈ ಮಾಣಿ, ತಾಪಂ ಸದಸ್ಯ ಪ್ರಭಾಕರ ಪ್ರಭು ಮೊದಲಾದವರಿದ್ದರು.












