ಬಂಟ್ವಾಳ ತಾಲೂಕಿನಲ್ಲಿ ರಾಷ್ಟ್ರಿಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಡಾ. ಅಶೋಕ್ ಕುಮಾರ್ ರೈ, ತಾಲೂಕು ಅರೋಗ್ಯಧಿಕಾರಿ ಬಂಟ್ವಾಳ ಇವರು ಪೋಲಿಯೋ ಹನಿಯನ್ನು ಮಕ್ಕಳಿಗೆ ನೀಡಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ರೋಟರಿ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಡಾ. ಪುಷ್ಪಲತಾ ಆಡಳಿತ ವೈದ್ಯಾಧಿಕಾರಿ ತಾ.ಆ.ಬಂಟ್ವಾಳ ಶುಭ ಹಾರೈಸಿದರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕು ಅರೋಗ್ಯಧಿಕಾರಿ ಬಂಟ್ವಾಳ ಇವರು ಬಂಟ್ವಾಳ ತಾಲೂಕಿನಲ್ಲಿ 0-5 ವರ್ಷದ 30651 ಮಕ್ಕಳಿಗೆ ಪೋಲಿಯೋ ಹನಿ ನೀಡಬೇಕಾಗಿದ್ದು ತಾಲೂಕಿನಾದ್ಯಂತ 190 ಬೂತ್ ಗಳನ್ನು ತೆರೆಯಲಾಗಿದೆ. ಇದರಲ್ಲಿ 784 ಕಾರ್ಯಕರ್ತೆಯರು ಲಸಿಕಾದಾರರಾಗಿ ಭಾಗವಹಿಸಲಿದ್ದಾರೆ.
ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಬೂತ್ ಗಳನ್ನು ತೆರೆಯಲಾಗಿದ್ದು, 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಿದರು.