Monday, January 26, 2026

ಬಂಟ್ವಾಳ ತಾಲೂಕು ಮಟ್ಟದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆಗಳ ಸಭೆ.

ಬಂಟ್ವಾಳ: ಕಂದಾಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ಪ್ರತಿಯೊಂದು ಕಡತಗಳಿಗೆ ಪರಿಶೀಲಿಸಿ ಕ್ರಮೈಗೊಳ್ಳಲಾಗುವುದು ಎಂದು ಹಿಂಬರಹ ನೀಡಲಾಗುತ್ತಿದೆ,ಆದರೆ ಉಳಿದ ಕಡತಗಳು ಸರಾಗವಾಗಿ ಪರಿಹಾರ ಕಾಣುತ್ತಿದೆ ಎಂಬ ಆರೋಪ ಇಂದು ಬಿಸಿರೋಡಿನ ತಾ.ಪಂ.ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ, ಪಂಗಡದ ಕುಂದುಕೊರತೆಗಳ ಸಭೆಯಲ್ಲಿ ಕೇಳಿಬಂತು.

ಬಂಟ್ವಾಳ ತಾಲೂಕು ಮಟ್ಟದ ಪರಿಶಿಷ್ಠ ಜಾತಿ, ಪಂಗಡ ಕುಂದು ಕೊರತೆ ಆಲಿಸುವ ಸಭೆ ಸಹಾಯಕ ಕಮೀಷನರ್ ಹರ್ಷವರ್ಧನ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಅವರು, ಪ್ರತಿ ಬಾರಿಯೂ ಸಭೆಯಲ್ಲಿ ಭರವಸೆಗಳ ಬಗ್ಗೆ ಮಾತನಾಡುವುಷ್ಟೇ ಅಲ್ಲ, ಅವುಗಳನ್ನು ಈಡೇರಿಸಲೂ ಕಾರ್ಯಕ್ರಮ ಆಗಬೇಕುಮ ಮಾರ್ಚ್ ಮೊದಲನೇ ವಾರ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ಕರೆಯಲಾಗುವುದು. ಆಗ ಪರಿಹಾರ ದೊರಕುತ್ತದೆ ಎಂದರು.

ತಹಸೀಲ್ದಾರ್ ಅರ್ಚನಾ ಭಟ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

ಡಿಸಿ ಮನ್ನಾ ಭೂಮಿಯ ಕುರಿತು ಪ್ರತಿ ಬಾರಿ ವರದಿಗಳು ಬರುತ್ತಿವೆ. ಅದರ ಕುರಿತ ಸೂಕ್ತ ನಿರ್ಧಾರಗಳು ಆದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಜನಾರ್ದನ ಚಂಡ್ತಿಮಾರ್ ಪ್ರಶ್ನೆಗೆ ಸಹಾಯಕ ಕಮೀಷನರ್ ಹರ್ಷವರ್ಧನ ಉತ್ತರಿಸಿದರು.

ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿಗೆ ಸೂಕ್ತ ಜಾಗ ನಿಗದಿಯಾಗುವ ವಿಚಾರದ ಕುರಿತು ಗಡಿಗುರುತು ಆಗಿಲ್ಲ, ಮಂಜೂರಾತಿ ಆಗಿ ಇಷ್ಟು ವರ್ಷಗಳಾದರೂ ಇನ್ನೂ ಯಾಕೆ ಆಗಿಲ್ಲ ಎಂದು ಮುಖಂಡರು ಪ್ರಶ್ನಿಸಿದರು. ಮುಂದಿನ ತಹಶಿಲ್ದಾರರ ಸಭೆಯಲ್ಲಿ ಇದರ ಬೆಳವಣಿಗೆ ಮಾಹಿತಿ ನೀಡಬೇಕು. ಜಂಟಿ ಸ್ಥಳತನಿಖೆ ನಡೆಸಿ, ನಿಗದಿಯಾದ ಜಾಗವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಕಮೀಚನರ್ ಹರ್ಷವರ್ಧನ ತಿಳಿಸಿದರು.

ಅಧಿಕಾರಿಗಳೇ ಸಭೆಯಲ್ಲಿ ಸರಿಯಾಗಿ ಹಾಜರಾಗದೇ ಇದ್ದರೆ ಸಭೆ ನಡೆಯುವುದು ಹೇಗೆ ಎಂದು ಮುಖಂಡ ಜನಾರ್ದನ ಬೋಳಂತೂರು ಹೇಳಿದರು. ಕಂದಾಯ ಇಲಾಖೆಯ ಮೇಲಂತಸ್ತಿಗೆ ಹೋಗುವ ದೃಷ್ಟಿಯಿಂದ ಆಳವಡಿಸಲಾದ ಲಿಪ್ಟ್ ಕೆಟ್ಟುಹೋಗಿರುವ ದೂರುನ್ನು ಆಲಿಸಿದ ಅಧಿಕಾರಿ ಮುಂದಿನ ಹತ್ತು ದಿನಗಳೊಳಗೆ ಸರಿಪಡಿಸುವಂತೆ ಸೂಚನೆ ನೀಡಿದರು.

ಮುಖಂಡರಾದವಪದ್ಮನಾಭ ನರಿಂಗಾನ ಅವರು ಹೃದಯಾಘಾತದಿಂದ ಮಂಗಳೂರಿಬ ಖಾಸಗಿ‌ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದು, ಅವರಿಗೆ ಸಂತಾಪವನ್ನು ಜನಾರ್ದನ ಚಂಡ್ತಿಮಾರ್ ಕೋರಿದರು. ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಪುದು ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ..

ಬಂಟ್ವಾಳ : ಬಂಟ್ವಾಳ ತಾಲೂಕಿನ ದ. ಕ. ಜಿ. ಪಂ. ಮಾ. ಹಿ. ಪ್ರಾ. ಶಾಲೆ ಪುದು ಇಲ್ಲಿ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ರಮ್ಲಾನ್ ಅವರು ಧ್ವಜಾರೋಹಣ...

ಸಜೀಪಮೂಡ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ..

ಬಂಟ್ವಾಳ : ಸಜೀಪಮೂಡ ವಲಯ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಮೂಲ ಸ್ವರೂಪ ಬದಲಾವಣೆ ಮಾಡಿದ ವಿರುದ್ಧ ವಲಯ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ...