Thursday, February 13, 2025

MDMA ಮಾದಕ ವಸ್ತು ಮಾರಾಟ ಯತ್ನ : ಇಬ್ಬರ ಬಂಧನ, ಓರ್ವ ಪರಾರಿ

ಬಂಟ್ವಾಳ: MDMA ನಿದ್ರಾಜನಕ ಮಾದಕ ವಸ್ತುಗಳ ಮಾರಾಟ ಮಾಡಲು ಬೈಕಿನಲ್ಲಿ ರೈಡ್ ಮಾಡುತ್ತಿದ್ದ ಮೂವರ ಪೈಕಿ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಎಸ್. ಐ.ರಾಮಕೃಷ್ಣ ನೇತ್ರತ್ವದ ತಂಡ ಬಂಧಿಸಿದ್ದು ಇನ್ನೋರ್ವ ಪರಾರಿಯಾಗಿರುವ ಘಟನೆ ನಡೆದಿದೆ.

ಮಂಚಿ ಗ್ರಾಮದ ಅಬ್ದುಲ್ ರಹೀಜ್ ಸಹಸವಾರ ಮಂಚಿ ನಿವಾಸಿ ದಾವುದುಲ್ ಅಮೀರ್ ಬಂಧಿತರಾಗಿದ್ದು ಇನ್ನೋರ್ವ ಸಹಸವಾರ ಬಂಟ್ವಾಳ ನಿವಾಸಿ ನಝೀರ್ ಎಂಬಾತ ಪರಾರಿಯಾಗಿದ್ದಾನೆ , ಈತನ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಬಂಧಿತರ ಕೈಯಿಂದ ಸುಮಾರು 4 ಸಾವಿರ ರೂ ಮೌಲ್ಯದ 4 ಗ್ರಾಂ 04 ಮಿ.ಗ್ರಾಂ ತೂಕದ ನಿದ್ರಾಜನಕ MDMA ಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ನಗರ ಠಾಣಾ ಎಸ್.ಐ.ಅವರು ಬ್ರಹ್ಮರಕೋಟ್ಲು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿರುವ ವೇಳೆ ನಂಬರ್ ಪ್ಲೇಟ್ ಇಲ್ಲದೆ ತ್ರಿಬಲ್ ರೈಡಿನಲ್ಲಿ ಬರುತ್ತಿದ್ದ ದ್ಬಿಚಕ್ರವಾಹನವೊಂದನ್ನು ನಿಲ್ಲಿಸಿ ಎಂದು ಸೂಚನೆ ನೀಡಿದಾಗ ಅದರಲ್ಲಿ ಓರ್ವ ಹಾರಿ ಪರಾರಿಯಾಗಿದ್ದ.

ಈ ಸಂದರ್ಭದಲ್ಲಿ ಸಂಶಯಗೊಂಡ ಎಸ್.ಐ. ಉಳಿದ ಇಬ್ಬರನ್ನು ವಿಚಾರಣೆ ನಡೆಸಿ ದಾಗ ಇವರು ನಿದ್ರಾಜನಕ ಮಾದಕವಸ್ತು ವನ್ನು ಸೇವನೆ ಮಾಡಿರುವುದು ಗಮನಕ್ಕೆ ಬಂದಿದೆ. ವಾಹನ ತಪಾಸಣೆ ನಡೆಸಿದಾಗ ಅದರಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಇರಿಸಲಾಗಿದ್ದ ಮಾದಕವಸ್ತು ಕಂಡು ಬಂದಿದ್ದು ,ಇವರ ಮೇಲೆ ಪ್ರಕರಣ ದಾಖಲಿಸಲಾಗಿದೆ.

More from the blog

ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕದ ವಾರ್ಷಿಕೋತ್ಸವ

ಕುಲಾಲ ಸೇವಾ ಸಂಘ ಹಾಗೂ ಮಹಿಳಾ ಘಟಕ ತುಂಬೆ ಇದರ ವಾರ್ಷಿಕೋತ್ಸವ ಹಾಗೂ ಮಹಾಸಭೆಯು ಶಾರದಾ ಸಭಾಭವನ ರಾಮಲ್ಕಟ್ಟೆ ತುಂಬೆಯಲ್ಲಿ ನಡೆಯಿತು. ಪುರ್ವಾನ್ಹ ವಾರ್ಷಿಕೋತ್ಸವವನ್ನು ಸಂಘದ ಅಧ್ಯಕ್ಷರಾದ ಶಿವಕುಮಾರ್ ಉದ್ಘಾಟಿಸಿದರು. ಅಪರಾನ್ಹ 3 ಘಂಟೆಗೆ...

ತಾತ್ಕಾಲಿಕ ರಸ್ತೆಯಿಂದ ನದಿಗೆ ಬಿದ್ದ ಟಿಪ್ಪರ್

ಕೈಕಂಬ: ಪೊಳಲಿ-ಅಡ್ಡೂರು ಪಲ್ಗುಣಿ ಸೇತುವೆಯ ದುರಸ್ಥಿ ಕಾಮಗಾರಿಯ ಹಿನ್ನಲೆಯಲ್ಲಿ‌ ನದಿಯಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಿಂದ ಟಿಪ್ಪರೊಂದು ನೀರಿಗೆ ಬಿದ್ದ ಘಟನೆ ಬುಧವಾರ ಸಂಭವಿಸಿದೆ. ಪೊಳಲಿ-ಅಡ್ಡೂರು ಸೇತುವೆಯ ದುರಸ್ಥಿ ಕಾಮಗಾರಿಯು ಭರದಿಂದ ಸಾಗುತ್ತಿದ್ದು,ಈ ಹಿನ್ನಲೆಯಲ್ಲಿ ಇದಕ್ಕೆ...

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...