Saturday, July 5, 2025

ಬೆಂಕಿ ತಗುಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಭೂರು ಸರಕಾರಿ ಪ್ರೌಢ ಶಾಲಾ ಬಾಲಕನ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

ಶಂಭೂರು ಸರಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಕಸವನ್ನು ವೇಳೆ ಹೊತ್ತಿಸುವ ವೇಳೆ ಅಪ್ರಾಪ್ತ ಶಾಲಾ ಬಾಲಕನೋರ್ವನಿಗೆ ಬೆಂಕಿ ತಾಗಿದ್ದು, ಬೆಂಕಿಯಿಂದ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಆಸ್ಪತ್ರೆಗೆ ಬೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ.

ಮಾ. 1 ರಂದು ಶಂಭೂರು ಶಾಲಾ ಆವರಣದಲ್ಲಿ ಘಟನೆ ನಡೆದಿದ್ದು, ಬಳಿಕ ಬಾಲಕನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ‌.

ಇದೀಗ ಆಸ್ಪತ್ರೆಗೆ ಬೇಟಿ ನೀಡಿದ ಶಾಸಕ ರಾಜೇಶ್ ನಾಯ್ಕ್ ಅವರು ಘಟನೆಯ ಬಗ್ಗೆ ಬಾಲಕನಿಂದ ಮಾಹಿತಿ ಪಡೆದಿದ್ದಾರೆ.

ಈ ಬಗ್ಗೆ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದಲೂ ಮಾಹಿತಿ ಕೇಳಿ ಪಡೆಯುದಾಗಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಬೇಟಿ ನೀಡಿದ ಸಂದರ್ಭದಲ್ಲಿ ವೈಯಕ್ತಿಕವಾಗಿ ಧನಸಹಾಯ ಮಾಡಿದಲ್ಲದೆ ಧೈರ್ಯ ತುಂಬಿದ್ದಾರೆ.  ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.

More from the blog

Bantwal Rain Damage: ಅನೇಕ ಮನೆಗಳಿಗೆ ಹಾನಿ

ಬಂಟ್ವಾಳ: ಜುಲೈ 3 ರಂದು ರಾತ್ರಿ ಸುರಿದ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ‌ ನಷ್ಟ ಸಂಭವಿಸಿದೆ. ನೆಟ್ಲ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಏಮಾಜೆ ಭಜನಾ ಮಂದಿರ ಬಳಿಯ ದೇವಪ್ಪ...

Rural station: ಮೇಯಲು ಬಿಟ್ಟ ಕರುಗಳ ಕಳವು, ಸಿ.ಸಿ.ಟಿ.ವಿಯಲ್ಲಿ ದೃಶ್ಯ ಸೆರೆ

ಬಂಟ್ವಾಳ: ಮೇಯಲು ಹೋಗಿದ್ದ ಕರುಗಳು ನಾಪತ್ತೆ, ಕರುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕದ್ದುಕೊಂಡುವ ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು,ಮಾಲೀಕರಿಗೆ ದೊರಕಿದ್ದು, ಇದೀಗ ಕರುಗಳನ್ನು ಪತ್ತೆ ಮಾಡಿಕೊಡಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ...

B. C. ROAD : ಜು.19ರಿಂದ 27ರವರೆಗೆ ಭಾರತ ದರ್ಶನ ಯಕ್ಷಗಾನ ತಾಳಮದ್ದಳೆ ನವಾಹ..

ಬಂಟ್ವಾಳ : ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ...

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...