ಬಂಟ್ವಾಳ : ತಾಲೂಕಿನ ಪಾಂಡವರ ಕಲ್ಲು ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗಳಿಬ್ಬರನ್ನು ಜಿಲ್ಲಾ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ನೌಷದ್ ಮತ್ತು ಈತನ ತಾಯಿ ರಹಿಮತ್ ಖುಲಾಸೆಗೊಂಡ ಆರೋಪಿಗಳಾಗಿದ್ದಾರೆ.
2020 ರ ಆಕ್ಟೋಬರ್ 14 ರಂದು ಆರೋಪಿಗಳು ಸ್ಥಳೀಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.ಈ ಕೇಸಿನ ತನಿಖೆ ನಡೆಸಿದ ಪುಂಜಾಲಕಟ್ಟೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.
ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳ ಇಟ್ಟಿ ಅವರು ಪ್ರಕರಣ ವಿಚಾರಣೆ ನಡೆಸಿ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ಆರೋಪಿಗಳು ನಿರ್ದೋಷಿಗಳಾಗಿದ್ದಾರೆ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಿರುತ್ತಾರೆ.
ಆರೋಪಿಗಳ ಪರವಾಗಿ ಬಿ.ಸಿ.ರೋಡಿನ ನ್ಯಾಯವಾದಿಗಳಾದ ಶ್ರೀಧರ ಪೈ ಮತ್ತು ಶುಭಶ್ರೀ ವಾದಿಸಿದ್ದರು.