ಬಂಟ್ವಾಳ: ಬಿ ಮೂಡ ಗ್ರಾಮದ ಬಿ ಸಿ ರೋಡು ಗೂಡಿನಬಳಿಯ ಚಿಕ್ಕಯಮಠ ಎಂಬಲ್ಲಿ ಗುಡ್ಡೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ಜು ಬಂಟ್ವಾಳ ಕಂದಾಯ ಇಲಾಖೆಯ ಕರೆಯಂತೆ ತಕ್ಷಣ ಬಂಟ್ವಾಳ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳ ಬಂಟ್ವಾಳದ ಸಹಾಯಕ ಠಾಣಾಧಿಕಾರಿ ರಾಜೇಶ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗ ಇವರೊಂದಿಗೆ ಬಂಟ್ವಾಳ ಕಂದಾಯ ಇಲಾಖೆಯ ಕರಿಬಸಪ್ಪ ನಾಯಕ್, ಸಿಬ್ಬಂದಿ ಸದಾಶಿವ ಕೈಕಂಬ ಸಹಕರಿಸಿದರು
ಹತ್ತಿರದಲ್ಲಿ ಅನೇಕ ಮನೆಗಳಿದ್ದು ಯಾವುದೇ ಆಪಾಯ ಆಗಿರುವುದಿಲ್ಲ.