Monday, July 14, 2025

ಕೊರೊನಾ ವೈರಸ್ ಹತೋಟಿಗೆ ಸಮರೋಪಾಧಿಯಲ್ಲಿ ಇಲಾಖೆಯ ಜೊತೆ ಕೈ ಜೋಡಿಸಲು ಬಿ.ಜೆ.ಪಿ ಯುವ ಕಾರ್ಯಕರ್ತರಿಗೆ ಮನವಿ: ಪ್ರದೀಪ್ ಅಜ್ಜಿಬೆಟ್ಟು

ಬಂಟ್ವಾಳ: ಜಗತ್ತೀನಾದ್ಯಂತ ಜನ ಸಮುದಾಯವನ್ನು ಬೆಚ್ಚಿ ಬೀಳಿಸಿದ, ಇಷ್ಟರವರೆಗೆ ಔಷಧವಿಲ್ಲದ ಕೊರೊನಾ ವೈರಸ್ ಮಾನವ ಜನಾಂಗಕ್ಕೆ ಒಂದು ಸವಾಲಾಗಿ ಪರಿಣಮಿಸಿರುವುದರಿಂದ ಮನುಷ್ಯನ ಸ್ವಯಂ ಆಧಾರಿತ ಪ್ರಕಾರಗಳಲ್ಲಿಯೇ ಹತೋಟಿಗೆ ತಂದು ಅದನ್ನು ಹಿಮ್ಮೆಟ್ಟಿಸುವ ಬಹುಪಾಲು ಜವಬ್ದಾರಿ ನಮ್ಮ ಮೇಲಿರುವ ಕಾರಣ ಸರ್ಕಾರದ ವಿವಿಧ ಇಲಾಖೆಯ ಅಡಿಯಲ್ಲಿ ಬರುವ ಅಧಿಕಾರಿಗಳೊಂದಿಗೆ ತಮ್ಮ ತಮ್ಮ ಊರಿನ ಸಂಘ ,ಸಂಸ್ಥೆಗಳೊಂದಿಗೆ ಬಿ.ಜಿ.ಪಿ ಯುವ ಕಾರ್ಯಕರ್ತರು ನಿಕಟವಾಗಿ ಸಂಪರ್ಕ ಇಟ್ಟುಕೊಂಡು ಸಮರೋಪಾಧಿಯಲ್ಲಿ ಈ ಭಯಾನಕ ವೈರಸ್ ಹತೋಟಿಗೆ ಶ್ರಮಿಸಲು ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಪತ್ರಿಕಾ ಹೇಳಿಕೆಯ ಮುಖಾಂತರ ವಿನಂತಿಸಿದ್ದಾರೆ.
ಇಂದಿನಿಂದ ಎಲ್ಲಾ ಯುವ ಬಿ.ಜೆ.ಪಿ ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಶಯದಂತೆ ಜನತಾ ಕರ್ಪ್ಯೂ ಗೆ ಸನ್ನದರಾಗಿ ಕೆಲ ದಿನಗಳ ಮಟ್ಟಿಗೆ ಮನೆಯಲ್ಲಿಯೇ ಇದ್ದುಕೊಂಡು, ವಿದೇಶದಿಂದ ಬಂದವರ ಬಗ್ಗೆ ತೀವ್ರ ಸ್ವರೂಪದ ನಿಗಾ ವಹಿಸುವಂತೆಯೂ ಮನವಿ ಮಾಡಿದ್ದಾರೆ.

More from the blog

ಯುವವಾಹಿನಿ ಬಂಟ್ವಾಳ ಘಟಕ : ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ..

ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಆಗಸ್ಟ್ 10 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯುವ ಆಟಿಡೊಂಜಿ ಕೂಟ ಸಮಾರಂಭದ ಆಮಂತ್ರಣ ಪತ್ರವನ್ನು ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಈ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಬಂಟರ ಸಂಘ ನರಿಕೊಂಬು – ಶಂಭೂರು ಅಧ್ಯಕ್ಷರಾಗಿ ಪ್ರೇಮನಾಥ ಶೆಟ್ಟಿ ಪುನರಾಯ್ಕೆ..

ಬಂಟ್ವಾಳ: ನರಿಕೊಂಬು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ ಅವರು ಬಂಟರ ಸಂಘ ನರಿಕೊಂಬು- ಶಂಭೂರು ಗ್ರಾಮ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆ ಆಗಿದ್ದಾರೆ. ಜು. 10 ರಂದು ಕರ್ಬೆಟ್ಟು ಭಾಸ್ಕರ ಶೆಟ್ಟಿ ವಸತಿಗ್ರಹದಲ್ಲಿ...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...