ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿ ಯದ್ವಾತದ್ವಾ ಚಲಿಸಿದ ಘಟನೆ ಮಾಣಿ ಸಮೀಪದ ಪೆರಾಜೆಯಲ್ಲಿ ನಡೆದಿದೆ.

ಪುತ್ತೂರಿನಿಂದ ಮಾಣಿ ಕಡೆಗೆ ತೆರಳುತ್ತಿದ್ದ ಕಾರು ರಸ್ತೆಯಿಂದ ಬದಿಗೆ ಸರಿದು ಅಡ್ಡಾದಿಡ್ಡಿಯಾಗಿ ಚಲಿಸಿ ಮೈಲುಗಲ್ಲಿಗೆ ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಚಲಿಸಿದ್ದ ಕಾರು ಪಲ್ಟಿಯಾಗುವ ಅಪಾಯ ಸ್ವಲ್ಪದರಲ್ಲೇ ತಪ್ಪಿದೆ.
ಈ ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ