ಬಂಟ್ವಾಳ: ದ.ಕ.ಲೋಕಸಭಾಗೆ ಗುರುವಾರ ನಡೆದ ಮತದಾನ ಸಂಪೂರ್ಣ ಶಾಂತಯುತವಾಗಿ ನಡೆದಿರುವುದು ಪೊಲೀಸ್ ಮತ್ತು ತಾಲೂಕಾಡಳಿತ ಪುಲ್ ಖುಷ್ ಪಟ್ಟಿದ್ದು,ಶುಕ್ರವಾರ ಪುಲ್ ವಿಶ್ರಾಂತಿಯ ಮೋರೆ ಹೋಗಿದ್ದಾರೆ. ಮುಂಜಾನೆ 5.30 ರವರೆಗೂ ಮೊಡಂಕಾಪಿನ ಮಸ್ಟರಿಂಗ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸಿದಚುನಾವಣಾ ಸಿಬಂದಿಗಲಕು ಹಾಗೂ ಪೊಲೀಸರು, ಬೆಳಗ್ಗಿನ ಜಾವ ಇವಿಎಂ ಯಂತ್ರ ಸುರತ್ಕಲ್ ಎನ್ ಐಟಿಕೆ ಗೆ ಸಾಗಿಸಿದ ಬಳಿಕವೇ ಅಧಿಕಾರಿಗಳು ನಿಟ್ಟುಸಿರುಬಿಟ್ಟು ಮನೆಯತ್ತ ಮುಖ ಮಾಡಿದರು. ಗುರುವಾರ ರಾತ್ರಿ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಅವರು ಮೊಡಂಕಾಪು ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಇವಿಎಂ ಯಂತ್ರದ ಜೋಡಣೆಯನ್ನು ಪರಿಶೀಲಿಸಿದರಲ್ಲದೆ ಸಲಹೆ ಸೂಚನೆಯನ್ನು ನೀಡಿದರು.

ಚಲಾಯಿಸದ ಮತ: ಬಂಟ್ವಾಳ ಕ್ಷೇತ್ರದಲ್ಲಿ ವಿಶೇಷವಾಗಿ ಐವರು ಮಂಗಳಮುಖಿಯರು ಮತದಾರರನ್ನು ಗುರುತಿಸಲಾಗಿತ್ತು. ಆದರೆ ಈ ಐವರು ಕೂಡ ಮತದಾನದಲ್ಲಿ ಭಾಗವಹಿಸಿಲ್ಲ.
ಒಟ್ಟು 109351 ಪುರುಷರ ಪೈಕಿ 87,051 ಮತ ಚಲಾಯಿಸಿದ್ದರೆ, 1,12,810 ಮಹಿಳೆಯರ ಪೈಕಿ 91,226 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆಯಾಗಿ 2,22,166 ಮತಗಳು ಕ್ಷೇತ್ರದಲ್ಲಿದ್ದು, ಅವರ ಪೈಕಿ 1,78,277 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.80.24 ಮತ ಚಲಾವಣೆಯಾಗಿದ್ದು ಬಂಟ್ವಾಳ ಕ್ಷೇತ್ರದ ಬೂತ್ ನಂಬ್ರ 96 ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಾವಿನಕಟ್ಟೆ (ಪೂರ್ವಭಾಗ)ದ ಬೂತ್ ನಲ್ಲಿ ಶೇ.89.84 ಮತಗಳು ಚಲಾವಣೆಯಾಗಿದ್ದು, ಇದು ಗರಿಷ್ಠ ಎಂದು ದಾಖಲಾಗಿದೆ. 390 ಪುರುಷರು, 407 ಮಹಿಳೆಯರು ಸೇರಿ 797 ಮತಗಳು ಇರುವ ಈ ಬೂತ್ ನಲ್ಲಿ 334 ಪುರುಷರು, 382 ಮಹಿಳೆಯರು ಸೇರಿ 716 ಮಂದಿ ಮತ ಚಲಾಯಿಸಿದ್ದಾರೆ. ಬೂತ್ ನಂಬ್ರ 190 ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಗ್ರಿ ಸಜಿಪಮೂಡದಲ್ಲಿ 744 ಮತಗಳಿದ್ದು, 491 ಚಲಾವಣೆಯಾಗಿವೆ. ಇದು ಕ್ಷೇತ್ರದಲ್ಲಿ ಕನಿಷ್ಠ 65.99 ಮತ ಚಲಾವಣೆಯಾದ ಬೂತ್. ಲೊರೆಟ್ಟೋದ ಸಖಿ ಮತಗಟ್ಟೆಯಲ್ಲಿ ಶೇ.76.73 ಮತ ಚಲಾವಣೆಯಾಗಿದೆ.
ಶಾಂತಯುತ ಮತದಾನದಲ್ಲಿ ಸಹಕರಿಸಿದ ಮತದಾರರು,ತಾಲೂಕು ತಹಶೀಲ್ದಾರ್ ಸಣ್ಣ ರಂಗಯ್ಯ ,ತಾಪಂ ಇಒ ರಾಜಣ್ಣ ಸಹಿತ ಸಿಬ್ಬಂದಿವರ್ಗ ಪೊಲೀಸ್ ಇಲಾಖೆಯನ್ನು ಜಿಪಂ ಉಪಕಾರ್ಯದರ್ಶಿ,ತಾಲೂಕು ಸಹಾಯಕ ಚುನಾವಣಾಧಿಕಾರಿ ಮಹೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.