Monday, January 26, 2026

ಚುನಾವಣಾ ಅಧಿಕಾರಿಗಳಿಂದ ಮಹತ್ವದ ಸೂಚನೆ

ಬಂಟ್ವಾಳ: ಚುನಾವಣೆ ದಿವಸ ಅಂದರೆ ಎಪ್ರಿಲ್ 18 ಮತ್ತು ಎಪ್ರಿಲ್ 23 ರಂದು ಯಾವುದೇ ಕಾರಣಕ್ಕೂ ನೀವು ಮೊಬೈಲ್ ಫೋನ್ ಅನ್ನು ಮತಗಟ್ಟೆಯ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ !!

ಮತಗಟ್ಟೆಯ ಒಳಗೆ ಅಥವಾ ಆಸುಪಾಸು ‌ಅಂದಾಜು 100 ಮೀಟರ್ ಸಮೀಪ ಯಾವುದೇ ಮೊಬೈಲ್ ಫೋನ್ ಬಳಕೆ ನಿರ್ಬಂಧಿಸಲಾಗಿದೆ ಮತ್ತು ಮತಗಟ್ಟೆಯ ಹತ್ತಿರ ಮೊಬೈಲ್ ಫೋನ್ ಇಡಲು ಯಾವುದೇ ವ್ಯವಸ್ಥೆಯನ್ನು ಮಾಡಿರುವುದಿಲ್ಲ !!

ಹಾಗಾಗಿ ಮೊಬೈಲ್ ಫೋನ್ಗಳನ್ನು ನಿಮ್ಮ ವಾಹನದಲ್ಲಿ ಅಥವಾ ಮನೆಯಲ್ಲಿಯೇ ಬಿಟ್ಟು ಬರಬೇಕು!

ದಯವಿಟ್ಟು ಈ ಮೆಸೇಜ್ ಅನ್ನು ಚುನಾವಣೆಯ ಮೊದಲು ನಿಮ್ಮ ಎಲ್ಲಾ ಗ್ರೂಪ್ ಗಳಿಗೆ ರವಾನಿಸಿ ಮತ್ತು ಜನರು ಇದರ ಕುರಿತು ಮುಂಗಡವಾಗಿ ಆಲೋಚನೆ ಮಾಡಲು ಸಹಕರಿಸಿ.

More from the blog

ಮಾಣಿಯಲ್ಲಿ ಹಿಂದೂ ಸಂಗಮ…

ಬಂಟ್ವಾಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ಪ್ರಯುಕ್ತ ಮಾಣಿ ಪೆರಾಜೆ ಬರಿಮಾರ್ ನೆಟ್ಲ ಮುಡ್ನೂರು, ಅನಂತಾಡಿ ಗ್ರಾಮಗಳನ್ನು ಒಳಗೊಂಡ ಮಾಣಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮ ನೇರಳಕಟ್ಟೆ ಗಣೇಶ ನಗರದಿಂದ ಬೃಹತ್ ಶೋಭಾಯಾತ್ರೆ...

ಜಕ್ರಿಬೆಟ್ಟು : ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹ ಆರಂಭ

ಬಂಟ್ವಾಳ: ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 13.5. ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಗೇಟ್ ಹಾಕಿ ನೀರು...

ಅಮ್ಮುoಜೆ : ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ..

ಬಂಟ್ವಾಳ : ಅಮ್ಮುoಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ನಡೆಯಿತು. ಜ.25ರಂದು ಭಾನುವಾರ ಬಲಿ ಉತ್ಸವ ನಡೆಯಿತು. ಶ್ರೀಕ್ಷೇತ್ರ ಪೊಳಲಿಯ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಳದ ಅರ್ಚಕ ನರೇಂದ್ರ ಭಟ್,...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...