ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕಾಗಿ ಮಂಗಳೂರಿನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಕ್ಕೆ ಆಗಮಿಸುವ ಕಾರ್ಯಕರ್ತರು ವಾಹನ ಪಾರ್ಕಿಂಗ್ ವ್ಯವಸ್ಥೆ ಈ ಕೆಳಗಿನಂತಿವೆ.

ರೂಟ್‍ನಂಬ್ರ: 1 ಉಡುಪಿ, ಕಾರ್ಕಳ,ಪಡುಬಿದ್ರೆ, ಮುಲ್ಕಿ, ಸುರತ್ಕಲ್,(ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ ) ಕಡೆಯಿಂದ ಬರುವಂತಹ ವಾಹನಗಳಿಗೆ.
ಕೊಟ್ಟಾರ ಚೌಕಿಯಾಗಿ – ಉರ್ವಸ್ಟೋರ್ – ಲೇಡಿಹಿಲ್ – ಲಾಲ್‍ಬಾಗ್ – ಪಿ.ವಿ.ಎಸ್ ಮಾರ್ಗವಾಗಿ ನವಭಾರತ್ ಸರ್ಕಲ್‍ನಲ್ಲಿ ಜನರನ್ನು ಇಳಿಸಿ ಕರಾವಳಿ ಉತ್ಸವ ಮೈದಾನ – ಉರ್ವ ಮಾರ್ಕೆಟ್ ಮೈದಾನ – ಉರ್ವಚರ್ಚ್ ಮೈದಾನ – ಕೆನರಾ ಹೈಸ್ಕೂಲ್ ಉರ್ವ ಮೈದಾನದಲ್ಲಿ ವಾಹನ ನಿಲುಗಡೆ ಮಾಡತಕ್ಕದ್ದು.
ರೂಟ್ ನಂಬ್ರ -2: ಸುಳ್ಯ- ಪುತ್ತೂರು- ಬೆಳ್ತಂಗಡಿ-ಬಂಟ್ವಾಳ- ಮೂಡಬಿದ್ರೆ–ಗುರುಪುರ ಕೈಕಂಬ ಕಡೆಯಿಂದ ಬರುವಂತಹ ವಾಹನಗಳಿಗೆ.
ಪಡೀಲ್ – ನಂತೂರು–ಕದ್ರಿ- ಬಲ್ಮಠ–ಜ್ಯೋತಿ ಸರ್ಕಲ್ (ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ )ನಲ್ಲಿ ಜನರನ್ನು ಇಳಿಸಿ ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಬಂಟ್ಸ್ ಹಾಸ್ಟೆಲ್ ಮೈದಾನ–ಕದ್ರಿ ಮೈದಾನ – ಬಲ್ಮಠ ಶಾಂತಿ ನಿಲಯ ಮೈದಾನ- ಪದುವಾ ಹೈಸ್ಕೂಲ್ ಮೈದಾನದಲ್ಲಿ ವಾಹನ ನಿಲುಗಡೆ ಮಾಡತಕ್ಕದ್ದು.
ರೂಟ್ ನಂಬ್ರ– 3: ಕೋಣಾಜೆ–ದೇರಳಕಟ್ಟೆ – ಉಳ್ಳಾಲ- ತೋಕ್ಕೋಟ್ಟು – ಕಾಸರಗೋಡು ಕಡೆಯಿಂದ ಬರುವಂತಹ ವಾಹನಗಳಿಗೆ :
ತೋಕ್ಕೋಟ್ಟು – ಪಂಪ್‍ವೆಲ್–ಕಂಕನಾಡಿ– ವೆಲೆನ್ಸೀಯಾ– ಮಂಗಳಾದೇವಿ(ಕಾರ್ಯಕರ್ತರನ್ನು ಕೆಳಗೆ ಇಳಿಸುವ ಸ್ಥಳ ) ಜಂಕ್ಷನ್‍ನಲ್ಲಿ ಜನರನ್ನು ಇಳಿಸಿ ಎಮ್ಮೆಕೆರೆ ಮೈದಾನ– ವಾಮನ ನಾಯಕ್ ಮೈದಾನ– ಮೋರ್ಗನ್ಸ್‍ಗೇಟ್ ಮೈದಾನ ವಾಹನ ನಿಲುಗಡೆ ಮಾಡತಕ್ಕದ್ದು.
ಎಂದು ನರೇಂದ್ರ ಮೋದಿ ಸಾರ್ವಜನಿಕ ಸಭೆಯ ಪಾರ್ಕಿಂಗ್ ವ್ಯವಸ್ಥೆಯ ಪ್ರಮುಖ್ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ .