ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ತಾ.ಪಂ.ಸಂಪರ್ಕ ರಸ್ತೆಯ ಡಾಮಾರು ಕಾಮಗಾರಿಯನ್ನು ವೀಕ್ಷಿಸಿದ್ದು, ಬಿ.ಸಿ.ರೋಡಿನ ಕೈಕುಂಜೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಮುಂದುವರಿದ ಭಾಗವಾಗಿ ಈ ಕಾಮಗಾರಿ ನಡೆಯುತ್ತಿದೆ.





ಕಳೆದ ಮಾರ್ಚ್ ನಲ್ಲಿ ಕೈಕುಂಜೆ ರಸ್ತೆ ಅಭಿವೃದ್ಧಿಗೆ ೨ ಕೋ.ರೂ.ವೆಚ್ಚದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಚಾಲನೆ ನೀಡಿದ್ದು, ಪ್ರಸ್ತುತ 190 ಮೀ.ಗಳ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ತಾ.ಪಂ.ಸಂಪರ್ಕ ರಸ್ತೆಯ ಡಾಮಾರು ಕಾಮಗಾರಿ ಕೂಡ ನಡೆದಿದೆ.
ಈ ರಸ್ತೆಯು ತಾ.ಪಂ.ನ ಜತೆಗೆ ಅಂಬೇಡ್ಕರ್ ಭವನ, ಎಸ್‌ಜಿಎಸ್‌ವೈ ಸಭಾಂಗಣ, ಬಂಟ್ವಾಳ ಶಾಸಕರ ಕಚೇರಿ-ಸಾಮರ್ಥ್ಯ ಸೌಧ, ಸ್ತ್ರೀಶಕ್ತಿ ಭವನ, ಕೃಷಿ ಇಲಾಖೆ, ಆಶ್ರಮ ಶಾಲೆ, ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ರಸ್ತೆ ಮುಂದುವರಿದು ಅನೇಕ ಮನೆಗಳಿಗೂ ಸಂಪರ್ಕ ಕಲ್ಪಿಸುತ್ತದೆ.
ಕೃಷಿ ಇಲಾಖೆಯ ಕಚೇರಿ ಸಮೀಪ ಕಾಂಕ್ರೀಟ್ ಮೋರಿಯೊಂದನ್ನು ನಿರ್ಮಿಸಲಾಗಿದೆ. ಕೈಕುಂಜೆ ರಸ್ತೆಯ ೧೯೦ ಮೀ. ಉದ್ದ ಹಾಗೂ ೧೦ರಿಂದ ೧೧ ಮೀ. ಅಗಲಕ್ಕೆ ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದ್ದು, ಕಾಂಕ್ರೀಟ್ ಚರಂಡಿ ಬಹುತೇಕ ಪೂರ್ಣವಾಗಿದೆ. ಮುಂದೆ ಹೈಮಾಸ್ಟ್ ದೀಪಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ.
ಬಂಟ್ವಾಳ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಆನಂದ ಎ.ಶಂಭೂರು ಯಶೋಧರ ಕರ್ಬೆಟ್ಟು, ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಯಶವಂತ ನಗ್ರಿ, ಸುರೇಶ್ ಕೋಟ್ಯಾನ್, ಜಿನೇಂದ್ರ ಜೈನ್, ಕೃಷ್ಣ ಬಿಸಿರೋಡು ಮೊದಲಾದವರು ಶಾಸಕರ ಜತೆಗಿದ್ದರು.

