ಬಂಟ್ವಾಳ: ಮರದಿಂದ ಬಿದ್ದು ಬೆನ್ನು ಮೂಲೆಮುರಿತಕ್ಕೊಳಗಾದ ಕುಕ್ಕಿಪಾಡಿ ನಿವಾಸಿ ಸುದೇಶ್ ಆಚಾರ್ಯ ಅವರ ಮನೆಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಆರ್ಥಿಕ ಸಹಾಯ ನೀಡಿದರು.

ಕೆಲ ತಿಂಗಳ ಹಿಂದೆ ಮರದಿಂದ ಬಿದ್ದು ಬೆನ್ನು ಮೂಲೆ ಮುರಿತಕ್ಕೋಲಾಗಾ ಗಿದ್ದ ಬಿಜೆಪಿ ಕಾರ್ಯಕರ್ತ ಸುದೇಶ್ ಉಪ್ಪಿರ ಇವರ ಮನೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಆರೋಗ್ಯ ವಿಚಾರಿಸಿ,ವೈಯಕ್ತಿಕ ವಾಗಿ ಧನ ಸಹಾಯ ಮಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.ಈ ಸಂಧರ್ಭದಲ್ಲಿ ಪೂಂಜ ದೇವಸ್ಥಾನದ ವ್ಯವಸ್ಥಪನ ಸಮಿತಿಯ ಅಧ್ಯಕ್ಷ ರತ್ನಕುಮಾರ್ ಚೌಟ,ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ,ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೊಂಬಯ್ಯ ಅರಳ,ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮನಾಥ ರಾಯಿ, ತಾಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನೇಶ್ ದoಬೆದಾರ್, ಸಿ.ಎ ಬ್ಯಾಂಕ್ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಪ್ರಮುಖರಾದ ಪುರುಷೋತ್ತಮ್ ಶೆಟ್ಟಿ ವಾಮದಪದವು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

