ಬಂಟ್ವಾಳ: ಖಾಸಗಿ ವಿಚಾರವೊಂದಕ್ಕೆ ಮಹಿಳೆಯೋರ್ವಳಿಗೆ ಇಬ್ಬರು ಗಂಡಸರು ಸೇರಿ

ತೀರಾ ಕೆಟ್ಟ ಪದಗಳನ್ನು ಬಳಸಿ ಬೈದಿರುವ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು , ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪತ್ತುಮುಡಿ ಎಂಬಲ್ಲಿ ಯಾವುದೋ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ರಕ್ತ ಸಂಬಂಧಿಕರು ಮಹಿಳೆಗೆ ಅವ್ಯಾಚ್ಚ ಶಬ್ದಗಳಲ್ಲಿ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ .
ಮಹಿಳೆಗೆ ತೀರಾ ಕೆಟ್ಟ ಪದಗಳ ಬಳಕೆ ಮಾಡಿ ಬೈದಿರುವ ಇಬ್ಬರು ವ್ಯಕ್ತಿಗಳ ಬಗ್ಗೆ ಮಹಿಳೆಯ ಸಹೋದರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

