ಬಂಟ್ವಾಳ: ಬರಿಮಾರು ಗ್ರಾಮದ ಮುಳ್ಳಿಬೈಲು ಬೆಟ್ಟು ಮನೆಯಲ್ಲಿ ವಾಸವಾಗಿರುವ ಗಣೇಶ ಮತ್ತು ರೂಪ ದಂಪತಿಗಳ ಪುತ್ರ ಒಂದೂವರೆ ವರ್ಷದ ಮಾಸ್ಟರ್ ಜೀವಿತ್ ಎಂಬ ಮಗುವಿಗೆ ಮಾತನಾಡಲು ಆಗದೆ,ತಲೆ ಎತ್ತಲು ಆಗದೆ,ನಡೆದಾಡಲು ಆಗದೆ, ದ್ರಷ್ಟಿ ಮಂದ ವಾದ ಕಾರಣ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮಗುವಿನ ಮೆದುಳಿಗೆ ಹೋಗುವ ಹಾಗೂ ಹೊರ ಬರುವ ನರ ಬ್ಲಾಕ್ ಆದ ಕಾರಣ ಎಂಜಿಯೋಗ್ರಾಫ್ ಮಾಡಿ ತಲೆ ಅಪರೇಶನ್ ಮಾಡಲು ಸುಮಾರು 4 ಲಕ್ಷ ರೂಪಾಯಿ ಖರ್ಚುವೆಚ್ಚ ತಗಲುತ್ತದೆ ಎಂದಿದ್ದು,ಮಗುವಿನ ಹೆತ್ತವರು ಚಿಕಿತ್ಸೆ ಯ ವೆಚ್ಚ ಬರಿಸಲಾಗದೆ ದಾನಿಗಳ ನೆರವು ಯಾಚಿಸುತ್ತಿದ್ದಾರೆ.

ಇವರ ಕಣ್ಣೀರ ಕಥೆಗೆ ಸ್ಪಂದಿಸಿರುವ “ನೇತಾಜಿ ಯುವಕ ಸಂಘ ಕುಪ್ಪಿಲ” ಹಾಗೂ “ಸಂಗಮ ಧೀನ ಬಂಧು ಒಕ್ಕೂಟ ಕುಪ್ಪಿಲ” 16,500 ರೂ ಗಳನ್ನು ಜ. 09 ರಂದು ಮಂಗಳೂರು ನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನೀಡಿರುತ್ತಾರೆ.
ಮಗುವಿನ ತಂದೆ ಕೂಲಿ ಕೆಲಸ ಮಾಡುತ್ತಿದ್ದು,ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದು ಅಷ್ಟೊಂದು ಹಣ ಭರಿಸುವುದು ಕಷ್ಟವಾಗಿದೆ.
ಪ್ರಾಥಮಿಕ ಚಿಕಿತ್ಸೆ ಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸುಮಾರು ಐವತ್ತು ಸಾವಿರ ದಷ್ಟು ಹಣವನ್ನು ಸಾಲ ಮಾಡಿ ಭರಿಸಿರುತ್ತಾರೆ.
ಹೀಗಾಗಲೇ ಮಗುವಿನ ಚಿಕಿತ್ಸೆಗೋಸ್ಕರ ಇದ್ದ ಮಾಂಗಲ್ಯ ಸರವನ್ನು ಕೂಡ ಮಾರಿದ್ದು ದಿಕ್ಕುತೋಚದಂತೆ ಆಗಿದೆ.
ನಿಮ್ಮೆಲ್ಲರ ಸಹಾಯದ ನಿರೀಕ್ಷೆಯಲ್ಲಿ,
ರೂಪಾ
W/O ಗಣೇಶ
ಮೋಬೈಲ್ ನಂ: +918971764578
ವಿಜಯ ಬ್ಯಾಂಕ್ ಬಿ. ಸಿ ರೋಡ್ ಬ್ರಾಂಚ್
A. C NO -101201011001879
IFSC – VIJB0001012