ಬಂಟ್ವಾಳ: ಒಂದು ಇಂಚು ಜಮೀನು ಬಿಟ್ಟು ಕೊಡದ ಇಂದಿನ ಕಾಲದಲ್ಲಿ ದೇವಾಲಯಕ್ಕೆ ಅತ್ಯಂತ ಬೆಲೆಬಾಳುವ 70 ಸೆಂಟ್ಸ್ ಜಾಗವನ್ನು ದಾನದ ರೂಪದಲ್ಲಿ ನೀಡಿದ ಕೃಷ್ಣ ಶ್ಯಾಮ್ ಅವರು ಸಜೀಪ ಗ್ರಾಮದಲ್ಲಿ ಅಭಿನಂದನೆಗೆ ಅರ್ಹರಾಗಿದ್ದಾರೆ.


ಮೂಲತಃ ಮಂಜಲ್ಪಾದೆ ನಿವಾಸಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ, ಸಮಾಜ ಸೇವಕ ಕೃಷ್ಣಶ್ಯಾಮ್ ಅವರು
ಶ್ರೀಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಇಲ್ಲಿಗೆ 70ಸೆಂಟ್ಸ್ ಭೂಮಿಯನ್ನು ದಾನ ರೂಪದಲ್ಲಿ ಶ್ರೀ ದೇವಾಲಯಾಕ್ಕೆ ಕೊಡುಗೆಯಾಗಿ ನೀಡಿದರು.
ದೇವಾಲಯಕ್ಕೆ ಭೂಮಿ ನೀಡಿದ ಬಗ್ಗೆ ದಾಖಲೆ ಪತ್ರವನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ ಇವರಿಗೆ ಹಸ್ತಾಂತರಿಸಿದರು.
ಸಜಿಪ ಮಾಗಣೆ ತಂತ್ರಿಎಂ ಸುಬ್ರಹ್ಮಣ್ಯ ಭಟ್. ಕೆ ಯೋಗೀಶ್ ಬೆಲ್ಚಡ. ಎಸ್ ವಿಶ್ವನಾಥ ಕೊಟ್ಟಾರಿ. ಬಾಲಕೃಷ್ಣ. ರವಿಚಂದ್ರ ಪಂಬದ. ಕುಸುಮ. ದಯಾನಂದ ಮೊದಲಾದವರು ಉಪಸ್ಥಿತರಿದ್ದರು.












