ಬಂಟ್ವಾಳ: ಸರಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸ್ವಾವಲಂಬನೆಯ ಬದುಕು ಸಾಗಿಸಿ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ತಾಲೂಕಿನ ವಿಕಲ ಚೇತನರಿಗೆ ಸರಕಾರದ ಅನುದಾನದಲ್ಲಿ ಸವಲತ್ತು ವಿತರಣೆ ಹಾಗೂ ಗ್ರಾ.ಪಂ.ಸದಸ್ಯರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರದ ಬೇರೆ ಬೇರೆ ಯೋಜನೆ ಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡು ಪ್ರಯೋಜನ ಪಡೆಯಲು ಅವರು ತಿಳಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ 2020-21 ಸಾಲಿನ 72 ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲಾಗಿದೆ.
ವಿಕಲಚೇತನರು ಇನ್ನೊಬ್ಬರ ಅವಲಂಬಿಸದೆ ಸ್ವತಂತ್ರವಾಗಿ ಬದುಕಲು ಸರಕಾರ ಸೌಲಭ್ಯಗಳನ್ನು ನೀಡಿದೆ ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ ಉಪಸ್ಥಿತರಿದ್ದರು.
ತಾ.ಪಂ.ಇ.ಒ.ರಾಜಣ್ಣ ಸ್ವಾಗತಿಸಿ ವಂದಿಸಿದರು.

