Friday, February 6, 2026

ಬಂಟ್ವಾಳ ತಾಲೂಕಿನಲ್ಲಿ ಕೋವಿಡ್ -19 ಲಸಿಕಾಕರಣ ಶಿಬಿರಗಳು

 

ಬಂಟ್ವಾಳ: ಕೊರೊನಾ ವಿರುದ್ದ ಜಾಗೃತಿಗಾಗಿ ತಾಲೂಕಿನ ಪ್ರತಿ ಗ್ರಾಮದಲ್ಲಿ ರುವ 60 ವರ್ಷ ಮೇಲ್ಪಟ್ಟವರು ಮತ್ತು 45-60 ವರ್ಷದೊಳಗಿನ ಆರೋಗ್ಯ ಸಮಸ್ಯೆ ಹೊಂದಿದವರು ಉಚಿತವಾಗಿ ಲಸಿಕೆ ಹಾಕಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಅಚ್ಚು ಕಟ್ಟಾಗಿ ಮಾಡಲಾಗಿದೆ.

ಲಸಿಕೆ ಪಡೆಯಲು ವಾರದ ಪ್ರತಿ ಮಂಗಳವಾರ , ಬುಧವಾರ , ಶುಕ್ರವಾರ ಮತ್ತು ಶನಿವಾರಗಳಂದು( ವಾರದಲ್ಲಿ 4 ದಿನ) ಸಮೀಪದ ಪ್ರಾಥಮಿಕ ಆರೋಗ್ಯಕ್ಕೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 4 ರೊಳಗೆ ಆಧಾರ್ ಕಾರ್ಡ್ ಪ್ರತಿ ಮತ್ತು ಮೊಬೈಲ್ ನೊಂದಿಗೆ ಬರುವಂತೆ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕು ಆಸ್ಪತ್ರೆಯ ಲ್ಲಿ ಆದಿತ್ಯವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹಾಕಿಕೊಳ್ಳುಬಹುದು . ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಗುರುವಾರ ಮತ್ತು ಆದಿತ್ಯವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾಕಿಸಿಕೊಳ್ಳಬಹುದು ಎಂದು ತಾಲೂಕು ಆರೋಗ್ಯ ಅಧಿಕಾರಿ ದೀಪಾಪ್ರಭು ತಿಳಿಸಿದ್ದಾರೆ.

More from the blog

ಬಂಟ್ವಾಳ : SDPI ವತಿಯಿಂದ ಬೂತ್ ಲೆವೆಲ್ ಏಜೆಂಟ್‌ಗಳ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬೂತ್ ಲೆವೆಲ್ ಏಜೆಂಟ್‌ಗಳ (BLA) ಸಮ್ಮಿಲನ ಕಾರ್ಯಕ್ರಮವು ಪಕ್ಷದ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಕ್ಷೇತ್ರಾಧ್ಯಕ್ಷ ಶಾಹುಲ್...

ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಭೆ..

ವಿಟ್ಲ : ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿ ಸಭೆಯು ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು. ಸಬೆಯ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪೆ.09 ರಿಂದ 12 ರ ತನಕ...

ಶ್ರೀ.ಕ್ಷೇ.ಧ.ಗ್ರಾ.ಯೋ.ಬಿ.ಸಿ. ಟ್ರಸ್ಟ್ ಬಂಟ್ವಾಳ : ವಾತ್ಸಲ್ಯಕಿಟ್ ಹಸ್ತಾಂತರ ಕಾರ್ಯಕ್ರಮ..

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಆರ್ಥಿಕವಾಗಿ ಅತಿ ದುರ್ಬಲ ಕುಟುಂಬಗಳಿಗೆ ವಾತ್ಸಲ್ಯಕಿಟ್ ಹಸ್ತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ...

ಕಟೀಲು 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.05ರ ಸೇವೆಯಾಟಗಳ ವಿವರ : ವಿಜಯ ಶೆಟ್ಟಿ, ಕೆಳಗಿನ ಮನೆ, ಸಾಣೂರು,...