ಬೆಂಗಳೂರು: ಮಾ 12 ಕೊರೊನಾ ಎರಡನೇ ಅಲೆ ಹಿನ್ನಲೆ ಕರ್ನಾಟಕದಲ್ಲಿ 1ರಿಂದ 5ನೇ ತರಗತಿ ಆರಂಭಿಸಲು ಅನುಮತಿ ಇಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.


ಕೆಲವು ಖಾಸಗಿ ಶಾಲೆಗಳು ಸರ್ಕಾರದ ಆದೇಶ ಮೀರಿ ೧ ರಿಂದ ೬ನೇ ಕ್ಲಾಸ್ ನಡೆಸುತ್ತಿವೆ. ಇಂಥ ಶಾಲೆಗಳ ಮಾಹಿತಿ ಪಡೆದು ಕಠಿಣ ಕ್ರಮಕೈಗೊಳ್ಳಲಾಗುತ್ತದೆ, ಶಾಲೆ ಆರಂಭಕ್ಕೆ ಆರೋಗ್ಯ ಇಲಾಖೆ ಸಮ್ಮತಿಸಿಲ್ಲ
ಆದೇಶ ಮೀರಿ ಶಾಲೆಗಳು ನಿರ್ಧಾರ ಮಾಡುವಂತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ ಎಂದರು.












