Thursday, June 26, 2025

ಪ್ರಶಸ್ತಿ ವಿಜೇತೆ ಪರಿಸರ ಪ್ರೇಮಿ, ಸಮಾಜ ಸೇವಕಿ ರೇಡಿಯೋ ಜಾಕಿ ರಶ್ಮಿ ಉಳ್ಳಾಲ್

ಉಡುಪಿ: ಮಾ.10 ತುಳುನಾಡಿನ ಕರಾವಳಿ ಪ್ರದೇಶವು ಇಂದು ಸ್ವಚ್ಚತೆಯನ್ನು ಕಾಪಾಡುದರೊಂದಿಗೆ ತನ್ನ ಪರಿಸರವನ್ನು ಹಸಿರಾಗಿರಿಸಿ ಶುದ್ದ ಗಾಳಿಯನ್ನು ಪರಿಸರಕ್ಕೆ ನೀಡುತ್ತಿದ್ದು ಅದಕ್ಕೆ ಕೇವಲ ಸರಕಾರನಗರ ಪಾಲಿಕೆ ಮಾತ್ರವಲ್ಲದೆ ಇತರ ಅನೇಕರ ಕೊಡುಗೆಯಿದೆ. ಇಂತವರಲ್ಲಿ ತನ್ನ ಪರಿಸರದಲ್ಲಿ ಹಸಿರನ್ನೇ ತನ್ನ ಉಸಿರಾಗಿಸಿಕೊಂಡ ಇತ್ತೀಚೆಗೆ ಕೇವಲ ಒಂದು ವಾರದ ಅಂತರದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತುಳುನಾಡಿನ  ಹೆಮ್ಮೆಯ ಪುತ್ರಿ ಆರ್. ಜೆ. ರಶ್ಮಿ ಉಳ್ಳಾಲ್ ಪ್ರಮುಖರು.

ರಶ್ಮಿ ಉಳ್ಳಾಲ್  ಅವರು ಬ್ಯಾಂಕ್ ಸಿಬ್ಬಂದಿ  ಆಗಿದ್ದ ಯು.ಎ.ಪ್ರೇಮನಾಥ್ ಮತ್ತು ಸರಕಾರಿ ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೀಳಾ ಕುಮಾರಿ ಅವರ ಸುಪುತ್ರಿ. ಎಂ.ಕಾಂ ಡಿಸ್ಟಿಂಷನ್  ಪಡೆದು ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದವರು ಇವರು. ಪೋಷಕರಿಂದ ಪ್ರೇರಣೆ ಪಡೆದು ಸಮಾಜ ಸೇವೆಯನ್ನು ತನ್ನ 16 ನೇ ವಯಸ್ಸಲ್ಲಿ ಆರಂಭಿಸಿದ್ದರು. ಸರಕಾರೇತರ ಸಂಘಟನೆ  “ದಿವ್ಯಾಸ್ ಯುವ ಸೇವಾ ಆರ್ಗನೈಜೇಷನ್”ನಲ್ಲಿ  ಸಾಮಾಜಿಕ ಕಾರ್ಯಕರ್ತೆಯಾಗಿ ತಮ್ಮ ಸಂಗಡಿಗರೊಂದಿಗೆ “ಸ್ಟೂಡೆಂಟ್ಸ್ ಆಫ್ ದಿ ಈಯರ್” ಮಕ್ಕಳಿಗೆ ಮೌಲ್ಯದ  ಬಗ್ಗೆ ಮೊತ್ತಮೊದಲ ಬಾರಿಗೆ ಜಿಲ್ಲಾಮಟ್ಟದ ಸ್ಪರ್ಧೆನಡೆಸಿ  ಮಂಗಳೂರಿನ   ಎಲ್ಲಾ ವಿದ್ಯಾಸಂಸ್ಥೆ ಯಿಂದ ಪ್ರಶಂಸೆಯನ್ನು ಪಡೆದಿರುವರು. ಮರವನ್ನು ಬೆಳೆಸಬೇಕುಉಳಿಸಬೇಕು, ಪ್ರಕೃತಿಯ ಮಹತ್ವಸ್ವಚ್ಛ ಮಂಗಳೂರು ಈ ವಿಷಯದ ಬಗ್ಗೆ ಕಾರ್ಯಕ್ರಮವನ್ನು ನಡೆಸಿದ್ದು,  ಬಾಲಾಶ್ರಮ ಹಾಗೂ ವೃದಾಶ್ರಮಕ್ಕೆ  ಅಗತ್ಯ ವಿರುವ ವಸ್ತುಗಳ ಜೊತೆಗೆ ಊಟ,  ತಿಂಡಿಯ  ವ್ಯವಸ್ಥೆಮನೋರಂಜನಾಹಾಗೂ ಆಶ್ರಮದ ಮಕ್ಕಳಿಗೆ ಶಿಕ್ಷಣದ ಮೌಲ್ಯವನ್ನು ತಿಳಿಸುವ ಕಾರ್ಯಕ್ರಮವನ್ನು  ಅನೇಕಬಾರಿ ಯಶಸ್ವಿಯಾಗಿ ನಡೆಸುತ್ತಾ ಬಂದಿರುವರು. ಅನೇಕ ಮಹಿಳೆಯರಿಗೆ  ಸಲಹೆ ಮಾಡುವ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ.

 

ಬಾಲ್ಯದಿಂಲೇ ರೇಡಿಯೋ  ಕ್ಷೇತ್ರ ದಲ್ಲಿ ವಿಶೇಷ ಆಸಕ್ತಿ ಪಡೆದಿದ್ದು ಸ್ವಾಮಿ ವಿವೇಕಾನಂದರ ತತ್ವ ಪಡೆದು ಮಂಗಳೂರಿನ ಆಕಾಶವಾಣಿ ಯಲ್ಲಿ   “ಯುವ ವಾಣಿ ”  ಯುವ ಜನರಿಗೆ ಸ್ಪೂರ್ತಿ ನೀಡುವ ಬಹಳಷ್ಟು ರೇಡಿಯೋ ಕಾರ್ಯಕ್ರಮ ನಡೆಸಿದ್ದು,   93.5 ರೆಡ್ ಎಫ್. ಎಂ. ಅಲ್ಲಿ ರೇಡಿಯೋ ಜಾಕಿ ಆಗಿ ಜನರಿಗೆ  ಪರಿಸರ  ಸಂರಕ್ಷಣೆ , ಸಾಮಾಜಿಕ ಕಳಕಳಿಯನ್ನು ಜೊತೆಗೆ  ರೇಡಿಯೋ ಕ್ಷೇತ್ರ ದಲ್ಲಿ ವಿಭಿನ್ನತೆ ಯನ್ನು ತಂದು ಮಂಗಳೂರು, ಉಡುಪಿಕುಂದಾಪುರ, ಕಾಸರಗೋಡು  ಸೇರಿದಂತೆ  ಕರ್ನಾಟಕದಲ್ಲೂ ಅಪಾರ ಅಭಿಮಾನಿಗಳನ್ನು  ಪಡೆದಿರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ.  ಹೆಸರಾಂತ ಕನ್ನಡ ಹಾಗು ತುಳು  ಚಿತ್ರರಂಗದ  ಎಲ್ಲಾ ಶ್ರೇಷ್ಠ ಕಲಾವಿದರ ರೇಡಿಯೋ ಸಂದರ್ಶನ ನಡೆಸಿದ್ದು  ಇವರು  ಹಲವಾರು ಸ್ಥಳೀಯ ಪ್ರತಿಭೆಯನ್ನು ಗುರುತಿಸಿ ಸಂದರ್ಶನ ನಡೆಸಿದ್ದಾರೆ. ಸರ್ವ  ಶಿಕ್ಷಣ ಅಭಿಯಾನ ದ ಬಗ್ಗೆ ಅಂಗ್ಲ ಭಾಷೆಯಲ್ಲಿ ನೀಡಿದ ಡಾಕ್ಯುಮೆಂಟರಿ ಗೆ ನ್ಯಾಷನಲ್ ಅವರ್ಡ್ ಸಿಕ್ಕಿದ್ದು ಸ್ವರ ( ವಾಯ್ಸ್ ಪ್ರೆಸೆಂಟೇಷನ್ ) ನೀಡಿದ ಹೆಗ್ಗಳಿಕೆ ಇವರದ್ದು.  ರಾಷ್ಟ್ರೀಯ ಮಟ್ಟದ ಉದಯ ಟಿವಿ ಸವಾಲಿಗೆ ಸೈ ಕಾರ್ಯಕ್ರಮದಲ್ಲಿ ಮಂಗಳೂರನ್ನು ಪ್ರತಿನಿಧಿಸಿದ್ದುತುಳು ಸಿನೇಮಾ ಪತ್ತನಾಜೆಉಮಿಲ್ ಸೇರಿದಂತೆ ಹಲವಾರು ಚಲನಚಿತ್ರ ಹಾಗೂ ಜಾಗೀರಾತುಗಳಿಗೆ  ವಾಯ್ಸ್ ಡಬ್ಬಿಂಗ್ ಮಾಡಿದ ಶ್ರೇಯ ರಶ್ಮಿಯವರದ್ದಾಗಿದೆ.

 ಬಹಳಷ್ಟು ಸಮಾಜಕ್ಕೆ ತಿಳಿಹೇಳುವ ಡಾಕ್ಯುಮೆಂಟರಿ ನಡೆಸಿದ್ದು , ಚಿಕ್ಕ ಅಂಗಡಿಗಳಲ್ಲಿ ಚೌಕಾಸಿ  ಮಾಡದಿರ , “ರೈತರ ಮಹತ್ವ”,  ಮಹಿಳೆಯರನ್ನು ಗೌರವಿಸು, ಗಿಡ ನೆಡಲು ಜಾಗ ಹುಡುಕುವವರಿಗೆ ಸ್ಮಶಾನದಲ್ಲೂ ಗಿಡ  ನೆಟ್ಟ ನಿದರ್ಶನ – ಮಾಧವ್ ಉಳ್ಳಾಲ್ ,  ಕುತ್ತಾರು ತಿಮ್ಮಕ್ಕ ಪಾರ್ದನ ಕಲಾವಿದೆ .  ಮಹಿಳಾ ಸಾಧಕಿಯನ್ನು ಪರಿಚಯಿಸುವ ಪ್ರಯತ್ನ ,  ಹೀಗೆ ವಿವಿಧ ಡಾಕ್ಯುಮೆಂಟರಿ ಗೆ ಸ್ಕಿರ್ಪ್ಟ್ ,  ವಾಯ್ಸ್ ,  ನಿರ್ದೇಶನ ಮಾಡಿ ಜನಸಾಮಾನ್ಯರ  ಪ್ರಶಂಸೆಗೆ ಪಾತ್ರರಾಗುದ್ದಾರೆ.  ಕುತ್ತಾರು ಆಶ್ರಮದಲ್ಲಿ  ಆಶ್ರಮದ ಮಕ್ಕಳ ಸಹಾಯದಿಂದ ಸೀಡ್  ಬಾಲ್ ( ಕೆಂಪು ಮಣ್ಣು + ಗೂ ಮೂತ್ರ + ಸೆಗಣಿ ಮಿಶ್ರಣದ ಒಳಗಡೆ ಬೀಜವನ್ನು ಹಾಕಿ ಹಸಿರು ಉತ್ಪತ್ತಿ ಮಾಡುವುದು )  ಅಭಿಯಾನ ವನ್ನು ನಡೆಸಿದ್ದು 1000ಕ್ಕೂ ಹೆಚ್ಚು ಸೀಡ್ ಬಾಲ್ ತಯಾರಿಸಿ ಯೆನಪೋಯ ಕಾಲೇಜು ಪರಿಸರದಲ್ಲಿ ಗಿಡ ಬೆಳೆದ ಕೀರ್ತಿ ಇವರದ್ದು. ಪ್ರಕೃತಿಯನ್ನು ಅಪಾರವಾಗಿ ಪ್ರೀತಿಸುವ ಇವರು ತನ್ನ ವಿವಾಹ ದಂದು ಬಂದ ಎಲ್ಲಾ ಅಥಿತಿಗಳಿಗೆ ಗಿಡವನ್ನು ಉಡುಗೊರೆ ಯಾಗಿ ನೀಡಿದ್ದು ಒಂದು ಇತಿಹಾಸವೇ ಸರಿ. ಮಾತಿನ ಜೊತೆಗೆ ಬರವಣಿಗೆ ಯಲ್ಲೂ ಗುರುತಿಸಿಕೊಂಡಿದ್ದು ಮರಕ್ಕೊಂದು ಪುನರ್ಜನ್ಮ,  ಪಶ್ಚಿಮ ಘಟ್ಟ ಎಂಬ ಸ್ವರ್ಗ ,  ಪ್ರಕೃತಿಯ ವಿರುದ್ಧ ಯಾವತ್ತೂ ಹೋಗದಿರೋಣ ಶೀರ್ಷಿಕೆ ಹೊಂದಿರುವ  ಬಹುತೇಕ ಬರವಣಿಗೆ  ಸಾಮಾಜಿಕ ಜಾಗ್ರತಿಯನ್ನು ಮೂಡಿಸುದರಿಂದ ಕೂಡಿದ್ದು ಇವರು   ಬರೆದ  ೧೦೦ ಕ್ಕೂ ಹೆಚ್ಚು  ಬರವಣಿಗೆ  ನಾಡಿನ ಖ್ಯಾತ ಪತ್ರಿಗೆಗಳಲ್ಲಿ ಪ್ರಕಟಗೊಂಡಿದೆ.   ಮಂಗಳೂರಿನ ಬಹಳಷ್ಟು  ಬ್ರಹತ್  ವೇದಿಕೆ ಯಲ್ಲಿ ಮುಖ್ಯ ಅತಿಥಿಯಾಗಿ ಕಾಣಿಸಿ ಕೊಳ್ಳುತ್ತಿರುವ ಇವರು  ಬದುಕಿನ ದಾರಿ ” ಹಾಗೆ ಪ್ರಕೃತಿ ಸಂರಕ್ಷಣೆ , ಪ್ರಕೃತಿ ಮಹತ್ವ , ಸೀಡ್ ಬಾಲ್ ಅಭಿಯಾನ ,   ಹೀಗೆ ಪ್ರಕೃತಿಯ ಬಗ್ಗೆ ಹಲವಾರು ಕಾರ್ಯಕ್ರಮ ನಡೆಸುತ್ತಿರುವರು.  ಇವರ ಸಾಮಾಜಿಕ ಕಾಳಜಿ ಗುರುತಿಸಿ  ಸ್ಥಳೀಯ ಅನೇಕ ಸಂಘಟನೆಗಳು ಇವರನ್ನು ಗೌರವಿಸಿ ಸನ್ಮಾನಿಸಿದೆ. 

 “ದಿವ್ಯಾಸ್ ಅನ್ನಪೂರ್ಣ ” ಯೋಜನೆಯ ಪ್ರಕಾರ ಮಂಗಳೂರಿನ  ಫಳ್ನೀರ್ , ಕಂಕನಾಡಿ , ಸ್ಟೇಟ್ ಬ್ಯಾಂಕ್ , ಹಂಪನ್ಕಟ್ಟ ಸೇರಿದಂತೆ ಸುತ್ತಮುತ್ತಲಿನ  ಪರಿಸರದಲ್ಲಿ   ಇರುವ ಮೂಕ  ಪ್ರಾಣಿ ಹಾಗು ಬಡ ಜನರಿಗೆ ರಾತ್ರಿ ಊಟ ನೀಡುವ ಯೋಜನೆ ಮಾಡಿದ್ದು ಬಹುತೇಕ ಯುವ ಜನರಿಗೆ ಸಮಾಜಕ್ಕೆ ಏನಾದರೂ ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತಿರುವರು .   ಲಾಕ್ ಡೌನ್ ಸಂದರ್ಭದಲ್ಲಿ  ಊಟದ ಕಿಟ್ ಹಾಗು  ಸರಕಾರಿ ಶಾಲೆಗೆ ಪುಸ್ತಕ , ಕೋವಿಡ್ ಥರ್ಮೋಮೀಟರ್  .ಮನೆಗೊಂದು ಗಿಡ ,  ಅಸಹಾಯಕರಿಗೆ  ಊಟ ತಯಾರಿಸಲು  ಪಾತ್ರೆಯ ವ್ಯವಸ್ಥೆ   ಹೀಗೇ ಬಹಳಷ್ಟು ಸಮಾಜಮುಖಿ ಕಾರ್ಯಗಳಿಗೆ ಆರ್ಥಿಕ  ಸಹಾಯ ಮಾಡಿರುತ್ತಾರೆ .

 

ಜನರು ಇಂತಹ ಕಾರ್ಯದಿಂದ ಪ್ರೇರಣೆ ಪಡೆದು ಮುಂದುವರಿಸಬೇಕು ಎನ್ನುವುದು ರಶ್ಮಿಯ ಉದ್ದೇಶ.  ಪ್ರಸ್ತುತ  ಬೆಂಗಳೂರಿನಲ್ಲಿ ಮ್ಯಾನೇಜರ್ ಹುದ್ದೆಯಲ್ಲಿ ಇದ್ದು ತನ್ನದೇ ಆದ  ಯೌಟ್ಯೂಬ್ ಚಾನೆಲ್   “ಆರ್ ಜೆ  ರಶ್ಮಿ  ಉಳ್ಳಾಲ್”  ಆರಂಭಿಸಿದ್ದು ಜನರಿಗೆ ಪ್ರೇರಣೆ ನೀಡುವ ಕಾರ್ಯವನ್ನು ನಡೆಸುತ್ತಿದ್ದಾರೆ .  ಇತ್ತೀಚೆಗೆ ಕರ್ನಾಟಕ ಹೃದಯವಂತರರು 2021 ಪ್ರಶಸ್ತಿ  ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನದಂದು ಅಪರಾಧ ನಿಯಂತ್ರಣ ಪಡೆ ಮತ್ತು ಅಭಿಜ್ಞಾನ ಪ್ರತಿಷ್ಠಾನದಿಂದ ಮಹಿಳಾ ಸಾಧಕರ ಪ್ರಶಸ್ತಿ 2021 ರಾಷ್ಟ್ರೀಯ ಪ್ರಶಸ್ತಿ ಯನ್ನು ಇವರ ಮನೆಗೆ ತಂದು ನೀಡಿದ್ದು ನಿಜಕ್ಕೂ ಇವರ ಸೇವೆಗೆ ಸಂದ ಗೌರವವಾಗಿದೆ.

 

More from the blog

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...