ಬಂಟ್ವಾಳ: ಕರ್ನಾಟಕ ಟೈಲರ್ಸ್ ಎಸೋಸಿಯೇಶನ್ (ರಿ) ಮಂಗಳೂರು.ಬಂಟ್ವಾಳ ಕ್ಷೇತ್ರ ಸಮಿತಿ ಇದರ ವತಿಯಿಂದ ಸಂಸ್ಥಾಪನ ದಿನಾಚರಣೆ ಅಂಗವಾಗಿ ಸಂಸ್ಥಾಪನಾ ದಿನಾಚರಣೆ ಹಾಗೂ ಅಶಕ್ತರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಕೆ.ಎಸ್.ಟಿ.ಎ
ಬಂಟ್ವಾಳ ಕ್ಷೇತ್ರ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಈಶ್ವರ ಕುಲಾಲ್ ಇವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಇವರು ಮಾ.7 ರಂದು ಭಾನುವಾರ ಬೆಳಗ್ಗೆ ಸ್ಪರ್ಶಾ ಕಲಾ ಮಂದಿರ ಬಿ.ಸಿ. ರೋಡು ಇಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.


ಮುಖ್ಯ ಅತಿಥಿಗಳಾಗಿ ಸುರೇಶ್ ಸಾಲ್ಯಾನ್ ರಾಜ್ಯ ಉಪಾಧ್ಯಕ್ಷರು ಮತ್ತು ಸಂಚಾಲಕರು ಕಟ್ಟಡ ಸಮಿತಿ ಕೆ. ಎಸ್.ಟಿ .ಎ,
ಮುಹಮ್ಮದ್ ಶರೀಫ್ ಅಧ್ಯಕ್ಷರು ಪುರಸಭೆ ಬಂಟ್ವಾಳ, ಡಾ. ಗೋಪಾಲಕೃಷ್ಣ ಆಚಾರ್ಯ ಮಾಲಕರು, ಬಜಾರ್ ಸಮೂಹ ಸಂಸ್ಥೆಗಳು ಹಾಗೂ ಫ್ರೈಡ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕೃತರು, ಸುಂದರ ಪೂಜಾರಿ ಬೊಳಂಗಡಿ ಅಧ್ಯಕ್ಷರು, ಯುವವಾಹಿನಿ ಬಂಟ್ವಾಳ ತಾಲೂಕು ಘಟಕ, ಸುಭಾಶ್ಚಂದ್ರ ಜೈನ್ ಅಧ್ಯಕ್ಷರು, ವರ್ತಕರ ವಿ.ಸ.ಸಂಘ (ನಿ), ಜನಾರ್ಧನ ಟೈಲರ್ ಬೊಂಡಾಲ ನಿರ್ದೇಶಕರು, ಸುಮಾಜ ಸೇವಾ ಸಹಕಾರಿ ಬ್ಯಾಂಕ್, ಪುರುಷೋತ್ತಮ ಎಸ್.ಮಾಣಿಮಜಲು ಗ್ರಾಮ ಪಂಚಾಯತ್ ಸದಸ್ಯರು ನರಿಕೊಂಬು, ಮತ್ತು ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಟಿ.ಎ ಬಂಟ್ವಾಳ, ಈ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಂಡು ಯಶಸ್ವಿ ಗೊಳಿಸುವಂತೆ ಎಂ.ನಾಗೇಶ್ ಪ್ರಧಾನ ಕಾರ್ಯದರ್ಶಿ, ಯಾದೇಶ್ ತುಂಬೆ ಕೋಶಾಧಿಕಾರಿ, ಈಶ್ವರ ಕುಲಾಲ್ ಅಧ್ಯಕ್ಷರು ಕ್ಷೇತ್ರ ಸಮಿತಿ ಮತ್ತು ವಲಯ ಸಮಿತಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೆ.ಎಸ್.ಟಿ.ಎ ಬಂಟ್ವಾಳ ಕ್ಷೇತ್ರ ಸಮಿತಿಯ ಪ್ರಕಟಣೆ ತಿಳಿಸಿದೆ.












