ಬಂಟ್ವಾಳ: ಬಂಟ್ವಾಳ ಪುರಸಭಾ ವ್ಯಾಪ್ತಿಯ ಜೈನರಪೇಟೆ ಸುಣ್ಣದಗೂಡು ನೇತ್ರಾವತಿ ಹಳೆಯ ಸೇತುವೆಯ ಪಕ್ಕದಲ್ಲಿ ನದಿಯಲ್ಲಿ ಅಪರಿಚಿತ ಶವ ಕಂಡು ಬಂದಿದೆ.
ನೇತ್ರಾವತಿ ನದಿಯಲ್ಲಿ ತೇಲಾಡುವ ಸ್ಥಿತಿಯಲ್ಲಿ ಅಪರಿಚಿತ ಶವ ಬೆಳಿಗ್ಗೆ ಕಂಡು ಬಂದಿದ್ದು , ಸ್ಥಳೀಯ ನಿವಾಸಿ ಅಬೂಸಾಲಿ ಪಿ.ಜೆ . ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಮಾಹಿತಿ ಮೇಲೆ ಬಂಟ್ವಾಳ ನಗರ ಪೋಲೀಸ್ ಎಸ್.ಐ.ಚಂದ್ರಶೇಖರ್ ಹಾಗೂ ಅಪರಾಧ ವಿಭಾಗದ ಎಸ್ .ಐ.ಸುಧಾಕರ ತೋನ್ಸೆ ಸ್ಥಳಕ್ಕೆ ಬೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಗೂಡಿನ ಬಳಿಯ ಈಜುಗಾರರು ಶವವನ್ನು ಮೇಲಕ್ಕೆತ್ತಿದ್ದಾರೆ. ಶವದ ಅಂಗಿಯಲ್ಲಿ ಪೊಳಲಿ ನಿವಾಸಿ ಎಂಬುದಕ್ಕೆ ಚೀಟಿಯೊಂದು ದೊರೆತಿದ್ದು ಪೋಲೀಸರು ವಿಳಾಸ ದ ತನಿಖೆ ನಡೆಸುತ್ತಿದ್ದಾರೆ.
ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ, ಕಾಲು ಜಾರಿ ನದಿಗೆ ಬಿದ್ದು ಸತ್ತು ಹೋಗಿದ್ದಾನಾ ಅಥವಾ ಇನ್ನಾವುದೋ ಕಾರಣದಿಂದ ಸತ್ತಿದ್ದಾನಾ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.