Thursday, February 5, 2026

ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕದಲ್ಲಿ ಜನೌಷಧಿ ದಿನಾಚರಣೆ

ಬಂಟ್ವಾಳ: ತಾ.03/03/2019ರಂದು ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕದ ಮಧುಕರ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜನೌಷಧಿ ಕೇಂದ್ರದ ಮಾಲಕರಿಂದ ನಡೆಸಲ್ಪಟ್ಟ ಮೂರನೇ ವರ್ಷದ ಜನೌಷಧಿ ದಿನಾಚರಣೆಯ ಸಂದರ್ಭದಲ್ಲಿ ಕಂಕನಾಡಿಯ ಜನೌಷಧಿ ಕೇಂದ್ರದ ಮಾಲಕರಾದ ರವೀಶ್‌ರವರು ಜನೌಷಧಿ ಕೇಂದ್ರದ ಸೌಲಭ್ಯದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳೆಲ್ಲರೂ ಸಾರ್ವಜನಿಕರಿಗೆ ಇದರ ಮಾಹಿತಿಯನ್ನು ತಿಳಿಸಬೇಕೆಂದರು.ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀಯುತ ವಸಂತ ಮಾಧವ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಸಿಗುವಂತಹ ಉತ್ತಮ ಗುಣಮಟ್ಟದ ಔಷಧಿಗಳನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಆಶಿಸಿದರು.

ವಿಟ್ಲ ಆರೋಗ್ಯ ಕೇಂದ್ರದ ವೈದ್ಯೆಯಾದ ಡಾ| ಶ್ರುತಿಯವರು ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆ ಮತ್ತು ಆರೋಗ್ಯದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಸುಧಾ ಕಶೆಕೋಡಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ ಕುಮಾರಿ ಪಿ ಉಪಸ್ಥಿತರಿದ್ದರು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ಜನೌಷಧಿ ಕೇಂದ್ರಗಳ ಮಾಲಕರಾದ ಸುಳ್ಯದ ಭವಿನ್ ಕುಮಾರ್ ಪಿ, ಗುರುವಾನಕೆರೆಯ ನಿತೀಶ್ ಶೆಟ್ಟಿ, ಅತ್ತಾವರದ ಚಂದ್ರಮೋಹನ್, ನಾಗುರಿಯ ವಿನ್ಸೆಂಟ್, ಬಂಟ್ವಾಳದ ಆಶ್ರಿತ್, ಮಾಣಿಯ ಶ್ರೀಕೃಷ್ಣಪ್ರಸಾದ್, ಸ್ಟೇಟ್‌ಬ್ಯಾಂಕ್‌ನ ಕೆ ನಾಗರಾಜ್ ಹಾಗೂ ತೊಕ್ಕೊಟ್ಟು ಒಳಪೇಟೆಯ ದಿವ್ಯಾ ನವೀನ್ ಉಪಸ್ಥಿತರಿದ್ದರು.

ಈ ಕಾರ್‍ಯಕ್ರಮದಲ್ಲಿ ಜನೌಷಧಿ ಕೇಂದ್ರದ ವತಿಯಿಂದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ವಿದ್ಯಾರ್ಥಿನಿಯರಿಗೆ ಸುವಿಧಾ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು. ಕಾರ್‍ಯಕ್ರಮವನ್ನು ಕೊಟ್ಟಾರದ ನವೀನ್‌ಚಂದ್ರ, ಮೆಲ್ಕಾರಿನ ಕೃಷ್ಣ ಕಿಶೋರ್ ಪಿ ಹಾಗೂ ಕಲ್ಲಡ್ಕದ ಮನಮೋಹನ ಹೊಳ್ಳ ನಿರ್ವಹಿಸಿದರು.

More from the blog

ಕಟೀಲು 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.05ರ ಸೇವೆಯಾಟಗಳ ವಿವರ : ವಿಜಯ ಶೆಟ್ಟಿ, ಕೆಳಗಿನ ಮನೆ, ಸಾಣೂರು,...

ಸುಮಂತ್ ಸಾವಿನ ಪ್ರಕರಣ : ಪೊಲೀಸರ ತನಿಖೆ ಚುರುಕು..

ಬೆಳ್ತಂಗಡಿ : ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ ಸಾವನ್ನಪ್ಪಿ ಇಂದಿಗೆ 22 ದಿನ ಕಳೆದರೂ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಸುಳಿವು ಸಿಕ್ಕಿಲ್ಲ. ಜ.14.ರಂದು ಬೆಳಿಗ್ಗೆ ಧನುಪೂಜೆಗೆಂದು ಮುಂಜಾನೆ ಮನೆಯಿಂದ ಹೋದ...

ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ಹೆದ್ದಾರಿಯಲ್ಲಿ ದಾರಿ ಸೂಚನಾ ಫಲಕ ಅಳವಡಿಕೆ..

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿರೋಡ್ - ಅಡ್ಡಹೊಳೆ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಕಮಾನು ಮಾದರಿಯಲ್ಲಿ ದಾರಿ ಸೂಚಕ ಫಲಕ ಅಳವಡಿಕೆಯ ಕಾರ್ಯ ಆರಂಭಗೊಂಡಿದೆ. ರಸ್ತೆ ನಿರ್ಮಾಣದ ಕಾಂಕ್ರೀಟ್ ಕಾಮಗಾರಿ...

ಬಂಟ್ವಾಳ : ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಜಗದೀಶ್ ರೈ ತುಂಬೆ ಆಯ್ಕೆ

ಬಂಟ್ವಾಳ : ಬಿ.ಸಿ.ರೋಡಿನ  ಸರಕಾರಿ ನೌಕರರ ಭವನದಲ್ಲಿ ಫೆ. 09ರಂದು ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಜಗದೀಶ್ ರೈ ತುಂಬೆ ಅವರು ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ಪ್ರಧಾನ...