ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ಫಿಟ್ನೆಸ್ ಮಲ್ಟಿ ಜಿಂ ಆಂಡ್ ಮಾರ್ಶಲ್ ಆಟ್ರ್ಸ್ ಸೆಂಟರ್ ಹಾಗೂ ಕೃಷ್ಣಾಪುರ ಎಕ್ಸ್ರೀಂ ಫಿಟ್ನೆಸ್ ಆಂಡ್ ಮಾರ್ಶಲ್ ಆಟ್ರ್ಸ್ ಫೈಟ್ ಕ್ಲಬ್ ಇಲ್ಲಿನ ವಿದ್ಯಾರ್ಥಿಗಳು ತಲಪಾಡಿ-ಕೆ ಸಿ ರೋಡು ಶಾರದಾ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಟ್ವೆಕಾಂಡೋ ಪಂದ್ಯಾವಳಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

45 ಕೆಜಿ ವಿಭಾಗದಲ್ಲಿ ವಿಟ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಫಾಯಿಝ್ ಕಡಂಬು, 55 ಕೆಜಿ ವಿಭಾಗದಲ್ಲಿ ಮೊಡಂಕಾಪು ಕಾರ್ಮೆಲ್ ಪಿಯು ಕಾಲೇಜು ವಿದ್ಯಾರ್ಥಿ ವಿಲಾಯತ್ ರಾಫಿ ಗೂಡಿನಬಳಿ, 59 ಕೆಜಿ ವಿಭಾಗದಲ್ಲಿ ಕೆನರಾ ಪಿಯು ಕಾಲೇಜು ವಿದ್ಯಾರ್ಥಿ, ಕೀರ್ತಿ ಪ್ರಕಾಶ್ ಸುವರ್ಣ ಮೊಗರ್ನಾಡು-ನರಿಕೊಂಬು, 63 ಕೆಜಿ ವಿಭಾಗದಲ್ಲಿ ಮಿಲಾಗ್ರೀಸ್ ಪಿಯು ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಫಾಯಿಝ್ ಫಾರೂಕ್ ಕೃಷ್ಣಾಪುರ, 68 ಕೆಜಿ ವಿಭಾಗದಲ್ಲಿ ಮಿಲಾಗ್ರೀಸ್ ಪಿಯು ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಶಹಬಾನ್ ಕಾನಾ-ಕೃಷ್ಣಾಪುರ, 78 ಕೆಜಿ ಮೇಲ್ಪಟ್ಟ ವಿಭಾಗದಲ್ಲಿ ಕೈಕಂಬ ಸೈಂಟ್ ರೇಮಂಡ್ಸ್ ಕಾಲೇಜು ವಿದ್ಯಾರ್ಥಿ ಹಾಗೂ ಬಾಲಕಿಯರ ವಿಭಾಗದ 44 ಕೆಜಿ ವಿಭಾಗದಲ್ಲಿ ತುಂಬೆ ಬಿ ಎ ಪಿಯು ಕಾಲೇಜು ವಿದ್ಯಾರ್ಥಿನಿ ಫಾತಿಮಾ ಮುಸ್ಕಾನ್ ನೆಹರುನಗರ ಅವರು ತೇರ್ಗಡೆಗೊಂಡಿದ್ದು, ಚಿಕ್ಕಮಗಳೂರಿನ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಟ್ವೆಕಾಂಡೋ ಪಂದ್ಯಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಟ್ವೆಕಾಂಡೋ ಮುಖ್ಯ ತರಬೆತುದಾರ ಇಸಾಕ್ ಇಸ್ಮಾಯಿಲ್ ನಂದಾವರ ಹಾಗೂ ಸಹ ತರಬೇತುದಾರರಾದ ಬಿ ಮುಹಮ್ಮದ್ ಶಾರೂಕ್ ಗೂಡಿನಬಳಿ, ಯೂಸುಫ್ ಹಫೀಝ್ ಬೋಗೋಡಿ, ಸುಹೈಲ್ ಕಡಂಬು-ವಿಟ್ಲ ಅವರುಗಳು ತರಬೇತಿ ನೀಡಿದ್ದಾರೆ.
