ಬಂಟ್ವಾಳ, ಮಾ. 3: ಬಿ.ಸಿ.ರೋಡು ಸುಂದರೀಕರಣ ಯೋಜನೆಯ ಭಾಗವಾಗಿ ಬಿ.ಸಿ.ರೋಡು ಜಂಕ್ಷನ್‌ನಿಂದ ಕೈಕುಂಜೆ ರಸ್ತೆಯ 2 ಕೋ.ರೂ.ವೆಚ್ಚದ ಕಾಂಕ್ರೀಟ್ ಕಾಮಗಾರಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಶಿಲಾನ್ಯಾಸ ನೆರವೇರಿಸಿದರು.




ಈ ವೇಳೆ ಮಾತನಾಡಿದ ಅವರು, ತಾಲೂಕು ಕೇಂದ್ರವಾದ ಬಿ.ಸಿ.ರೋಡು ಸುಂದರೀಕರಣ ಯೋಜನೆಯು ಕೋವಿಡ್ ಕಾರಣಕ್ಕೆ ಕೊಂಚ ವಿಳಂಬವಾಗಿದ್ದು, ಇದೀಗ ಮುಖ್ಯಮಂತ್ರಿಗಳ ವಿಶೇಷ ಅನುದಾನದ 2 ಕೋ.ರೂ.ಗಳಲ್ಲಿ ಕೈಕುಂಜೆಯ 190 ಮೀ. ರಸ್ತೆಗೆ ಕಾಂಕ್ರೀಟ್ ಕಾಮಗಾರಿ ನಡೆಯಲಿದ್ದು, ಮಧ್ಯೆ ಡಿವೈಡರ್ ಜತೆಗೆ ವಿದ್ಯುತ್ ದೀಪ ಬರಲಿದೆ. ಶೀಘ್ರದಲ್ಲಿ ಈ ಕಾಮಗಾರಿ ಮುಗಿಸಲಾಗುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ.ಸದಸ್ಯರಾದ ಕಮಲಾಕ್ಷಿ ಪೂಜಾರಿ, ತುಂಗಪ್ಪ ಬಂಗೇರ, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಬುಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಸ್ಥಳೀಯ ಪುರಸಭಾ ಸದಸ್ಯ ಗೋವಿಂದ ಪ್ರಭು, ನಗರ ನೀರು ಸರಬರಾಜು-ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಭಟ್, ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಲೋಕೋಪಯೋಗಿ ಇಲಾಖೆಯ ಎಇಇ ಷಣ್ಮುಗಂ, ಸಹಾಯ ಎಂಜಿನಿಯರ್ ಅಮೃತ್‌ಕುಮಾರ್, ಪ್ರಮುಖರಾದ ಗಣೇಶ್ ಪೈ ಮಾಣಿ, ಹರಿಪ್ರಸಾದ್, ರೊನಾಡ್ದ್ ಡಿ’ಸೋಜ, ಬ್ರಿಜೇಶ್ ಚೌಟ, ರಾಮದಾಸ್ ಬಂಟ್ವಾಳ, ಡೊಂಬಯ ಅರಳ, ರವೀಶ್ ಶೆಟ್ಟಿ, ಪುಷ್ಪರಾಜ್ ಚೌಟ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಸೀತಾರಾಮ ಪೂಜಾರಿ, ಚರಣ್ ಜುಮಾದಿಗುಡ್ಡೆ, ಭಾರತಿ ಚೌಟ, ಪ್ರಮೋದ್ ಅಜಿಬೆಟ್ಟು, ಪ್ರಕಾಶ್ ಅಂಚನ್, ಯಶೋಧರ ಕರ್ಬೆಟ್ಟು, ಸುದರ್ಶನ್ ಬಜ, ಪ್ರದೀಪ್ ಅಜಿಬೆಟ್ಟು, ಮಚ್ಚೇಂದ್ರನಾಥ ಸಾಲ್ಯಾನ್, ಮಹೇಶ್ ಶೆಟ್ಟಿ ಮೊದಲಾದವರಿದ್ದರು.












