ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಬಂಟ್ವಾಳ ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಇತರ ಸರಕಾರಿ ಇಲಾಖೆಗಳ ಸಹಯೋಗದೊಂದಿಗೆ ಮಾ. 26ರಿಂದ 29ರವರೆಗೆ ಕಾನೂನು ಸಾಕ್ಷರತಾ ರಥ ಮತ್ತು ಸಂಚಾರಿ ನ್ಯಾಯಾಲಯದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಮಾ. 26ರಂದು ಬೆಳಿಗ್ಗೆ 10.30ಕ್ಕೆ ಬಂಟ್ವಾಳ ನ್ಯಾಯಾಲಯದ ಆವರಣದಲ್ಲಿ ಕಾನೂನು ಸಾಕ್ಷರತಾ ರಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಮುಹಮ್ಮದ್ ಇಮ್ತಿಯಾಝ್ ಅಹ್ಮದ್ ಚಾಲನೆ ನೀಡುವರು. ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 12ಕ್ಕೆ ಕೊಡಂಗೆ ಸರಕಾರಿ ಪ್ರೌಢಶಾಲೆ, ಸಂಜೆ 3ಕ್ಕೆ ಪುದು ಗ್ರಾಪಂ ವಠಾರದಲ್ಲಿ ಸಂಚರಿಸಲಿದೆ.
ಮಾ. 27ರಂದು ಬೆಳಿಗ್ಗೆ 10ಕ್ಕೆ ಗೊಳ್ತಮಜಲು ಗ್ರಾಪಂ, ಮಧ್ಯಾಹ್ನ 12ಕ್ಕೆ ನಂದಾವರ ಸರಕಾರಿ ಪ್ರೌಢಶಾಲೆ, ಸಂಜೆ 3ಕ್ಕೆ ಮಾಣಿ ಗ್ರಾಪಂ., ಮಾ. 28ರಂದು ಬೆಳಿಗ್ಗೆ 10ಕ್ಕೆ ಅಮ್ಟಾಡಿ ಗ್ರಾಪಂ, ಮಧ್ಯಾಹ್ನ 12ಕ್ಕೆ ಕೊಯಿಲಾ ಸರಕಾರಿ ಪ್ರೌಢಶಾಲೆ, ಸಂಜೆ 3ಕ್ಕೆ ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಣ. ಮಾ. 29ರಂದು ಬೆಳಿಗ್ಗೆ 10ಕ್ಕೆ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮಧ್ಯಾಹ್ನ 12ಕ್ಕೆ ತುಂಬೆ ಬಿ.ಎ.ಕೈಗಾರಿಕಾ ತರಬೇತಿ ಸಂಸ್ಥೆ, ಸಂಜೆ 4ಕ್ಕೆ ಬಿ.ಸಿ.ರೋಡ್ ನ್ಯಾಯಾಲಯದ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಕಟನೆ ತಿಳಿಸಿದೆ.