Thursday, January 29, 2026

ನಿರಾಶ್ರಿತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪುಣ್ಯದ ಕೆಲಸ : ಸಿಡಿಪಿಒ ಗಾಯತ್ರಿ ಕಂಬಳಿ

ಬಂಟ್ವಾಳ: ವಿವಿಧ ಕಾರಣದಿಂದ ಮನೆ ಬಿಟ್ಟು  ರಸ್ತೆಯಲ್ಲಿ ಅಲೆದಾಡುವ ನಿರಾಶ್ರಿತರು,ಬಿಕ್ಷಕರನ್ನು ರಕ್ಷಿಸಿ  ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಅತ್ಯಂತ ಪುಣ್ಯದ ಕೆಲಸ ಎಂದು ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಗಾಯತ್ರಿ ಆರ್ .ಕಂಬಳಿ ತಿಳಿಸಿದ್ದಾರೆ. ಬುಧವಾರ ರಾತ್ರಿ ಬಿ.ಸಿ.ರೋಡಿನ ಗೋಲ್ಡನ್ ಮೈದಾನದಲ್ಲಿ ನಡೆಯುವ ಕರಾವಳಿ ಕಲೋತ್ಸವ 2021 ವೇದಿಕೆಯಲ್ಲಿ ಚಿಣ್ಣರ ಕಲೋತ್ಸವ ಮೋಕೆದ ಕಲಾವಿದರ ಟ್ರಸ್ಟ್ ನಿಂದ  ಅಂಗಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದ ನಿರಾಶ್ರಿತರ ಸೇವಾ ಬಂಧುವಿನ‌ ವೆಬ್ ಸೈಟನ್ನು ಉದ್ಘಾಟಿಸಿ ಅವರು ಮಾತನಾಡಿ ಸಂಸ್ಥೆಯ ಈ ಕಾರ್ಯವನ್ನು ಅಭಿನಂದಿಸಿದರು.

ಉದ್ದೇಶಪೂರ್ವಕವಾಗಿ ಯಾರು ಕೂಡ ಬಿಕ್ಷುಕರು ಅಥವಾ ನಿರಾಶ್ರಿತರು, ಬಿಕ್ಷುಕರಾಗುವುದಿಲ್ಲ  ಯಾವುದೋ ಸಂದಿಗ್ದತೆಗೆ ಸಿಲುಕಿ ಮನೆ ಬಿಟ್ಟು ರಸ್ತೆಗೆ ಬರುವ  ಮಹಿಳೆಯರು,ಮಕ್ಕಳನ್ನು ಪ್ರಮುಖವಾಗಿ  ರಕ್ಷಿಸುವ ಕಾರ್ಯ ತುರ್ತಾಗಿ  ನಡೆಯಬೇಕಾಗುತ್ತದೆ. ಇಲ್ಲದಿದ್ದಲ್ಲಿ ನಿರಾಶ್ರಿತರ ಹೆಸರಿನಲ್ಲಿ ನಡೆಯುವ ದೊಡ್ಡ ಜಾಲಕ್ಕೆ ಸಿಲುಕುವ ಅಪಾಯವಿದೆ.ಈ ನಿಟ್ಟಿನಲ್ಲಿ ಸಿಡಿಪಿಒ ಇಲಾಖೆ ನಡೆಸುವ ಕಾರ್ಯಾಚರಣೆಗೆ ಸೇವಾಬಂಧು ಸಂಸ್ಥೆಯ ಸಹಕಾರವು ಅಗತ್ಯವಿದೆ ಎಂದರು.  ಮೈದಾನದ ಪಾಲುದಾರರಲ್ಲೊಬ್ಬರಾದ  ಅಜಿತ್ ಕುಮಾರ್ ಬರಿಮಾರ್ ನೂತನ ಸೇವಾಬಂಧು ಸಂಸ್ಥೆಯನ್ನು ಉದ್ಗಾಟಿಸಿ ಶುಭಹಾರೈಸಿದರು.

ಇದೇವೇಳೆ ಸ್ವಚ್ಚತೆಯಲ್ಲಿ ತೊಡಗಿಸಿದ್ದ  ಹೊರಜಿಲ್ಲೆಯ ಮೂವರು ಮಹಿಳಾ ಕಾರ್ಮಿಕೆಯರ ಸಹಿತ ಕಲೋತ್ಸವದ ಯಶಸ್ವಿಗೆ ದುಡಿದ ವಿವಿಧ ವಿಭಾಗದ ಸ್ವಯಂಸೇವಕರು,ಮೈದಾನದ ಪಾಲುದಾರರನ್ನು ಗೌರವಿಸಲಾಯಿತು.   ಕರಾವಳಿಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ಜಾತಿ,ಮತ,ಪಕ್ಷ ಬೇಧ ಮರೆತು ಸೇರಿ ಸೌಹಾರ್ಧತೆ,ಸಾಮರಸ್ಯದ ಸಂಕೇತವಾಗಿ ಈ ಕಲೋತ್ಸವ ಮೂಡಿಬಂದಿದ್ದು,ಇದಕ್ಕೆ ಸಹಕರಿಸಿದವರನ್ನು ಕೃತಜ್ಞತೆ ಸಲ್ಲಿಸಿದರು.

ಬಂಟ್ವಾಳ ಶಿಕ್ಷಣ ಇಲಾಖಾ ಸಂಯೋಜಕಿ ಸುಜಾತಾ ಹಿರಿಯ ಕಲಾವಿದ ಮಂಜುವಿಟ್ಲ, ಮೈದಾನದ ಮತ್ತೊರ್ವ ಪಾಲುದಾರ ಜಗನ್ನಾಥ ಚೌಟ ಬದಿಗುಡ್ಡೆ, ಸೇವಾ ಬಂಧು ಸದಸ್ಯರಾದ ಇಬ್ರಾಹಿಂ ಕೈಲಾರ್,ರಾಜು ಚಂಡ್ತಿಮಾರ್,ಸಂದೀಪ್ ಸಾಲ್ಯಾನ್, ಶಿವಪ್ರಸಾದ್ ಕೊಟ್ಟಾರಿ,ಮಹಮ್ಮದ್ ನಂದಾವರ, ನವೀನ್ ಆಳ್ವ ಮೊದಲಾದವರು ವೇದಿಕೆಯಲ್ಲಿದ್ದರು.ಸಂಸ್ಥೆಯ ಸಂಸ್ಥಾಪಕ ಮೋಹನದಾಸ್ ಕೊಟ್ಟಾರಿ ಪ್ರಸ್ತಾವಿಸಿ ಕಳೆದ 16 ವರ್ಷಗಳಿಂದ ಪೊಲೀಸ್ ಇಲಾಖೆಯ ಸಹಕಾರದಿಂದ ತೆರೆ ಮರೆಯಲ್ಲಿ ನಿರಾಶ್ರಿರನ್ನು ರಕ್ಷಸಿ ನಿರಾಶಿತರ ಕೇಂದ್ರಕ್ಕೆ ಒಪ್ಪಿಸಲಾಗುತಿತ್ತು.ಮುಂದಿನ ದಿನದಲ್ಲಿ ಸೇವಾಬಂಧು ಹೆಸರಿನಲ್ಲಿ ವಿವಿಧ ಇಲಾಖೆಯ ಸಹಕಾರದಿಂದ ಅಧಿಕೃತವಾಗಿ  ಕಾರ್ಯಾಚರಿಸಲಿದೆ ಎಂದರು.ಸದಸ್ಯ ಫಾರೂಕ್ ಗೂಡಿನ ಬಳಿ ಸ್ವಾಗತಿಸಿದರು.ಸೌಮ್ಯ ಯಶವಂತ್ ಭಂಡಾರಿಬೆಟ್ಟು ವಂದಿಸಿದರು.ರತ್ನದೇವ್ ಪೂಂಜಾಲಕಟ್ಟೆ ಕಾರ್ಯಕ್ರಮ ನಿರೂಪಿಸಿದರು.ಬಳಿಕ ನೃತ್ಯ ಕಾರ್ಯಕ್ರಮ ನಡೆಯಿತು.

More from the blog

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...