ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ವೇದಿಕೆಯಲ್ಲಿ ಹಠಾತ್ ಆಗಿ ಕುಸಿದು ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರು ಪುರಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುವ ಮಾ.9 ರಿಂದ ಒಂದು ವಾರಗಳ ಕಾಲ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ತುಳು ನಾಟಕ ಪರ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದ ವೇದಿಕೆ ಹಂಚಿಕೊಳ್ಳಲು ವೇದಿಕೆ ಹತ್ತುವ ವೇಳೆ ಹಠಾತ್ ಅಗಿ ಕುಸಿದು ಬಿದ್ದು ಇವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಇವರು ಪ್ರತಿ ದಿನ ತುಳು ನಾಟಕ ಪರ್ಬ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಖುತ್ತಿದ್ದರು, ಜ್ವರದ ಬಳಲಿಕೆಯಿಂದ ಇವರು ಕುಸಿದು ಬಿದ್ದಿರಬೇಕು ಎಂದು ಹೇಳಲಾಗುತ್ತಿದ್ದು ಸ್ಪಷ್ಟ ವಾದ ಕಾರಣ ಸಿಕ್ಕಿಲ್ಲ.