Tuesday, July 8, 2025

ಪುನರ್ ಪ್ರತಿಷ್ಠಾ ದಿನಾಚರಣೆ,ವಾರ್ಷಿಕ ಜಾತ್ರೋತ್ಸವ

ಬಂಟ್ವಾಳ: ಸಜೀಪಮೂಡ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಜಾತ್ರೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಕೆ.ಯು. ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈಧಿಕ ವಿಧಿವಿಧಾನಗಳೊಂದಿಗೆ ನಡೆಯಿತು‌. ಧಾರ್ಮಿಕ ಕಾರ್ಯ ಕ್ರಮದ ಪ್ರಯುಕ್ತ ಪುಣ್ಯಾಹ,ಪಂಚಗವ್ಯ,ಗಣಹೋಮ,ಸಾನಿಧ್ಯ ಕಲಶಾಭಿಷೇಕ,ರುದ್ರಾಭಿಷೇಕ,ಪಂಚಾಮೃತ ಅಭಿಷೇಕ, ಅನ್ನದನ,ರಂಗಪೂಜೆ, ಭಜನೆ,ಅಷ್ಟವಧಾನ ಸೇವೆ,ವಿವಿಧ ವಿನೋದಾವಳಿ,ಸುಡುಮದ್ದು ಪ್ರದರ್ಶನ ನಡೆಯಿತು.ಇದೇವೇಳೆ ಪಾಕಶಾಸ್ತ್ರ ಪ್ರವೀಣ ಓಣಿ ಬೈಲು ಶಮಕರನಾರಾಯಣ ಐತಾಳ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸದಾನಂದ ಪೂಂಜಾ,ಎಂ.ಸುಬ್ರಹ್ಮಣ್ಯ ಭಟ್,ವಿಶ್ವನಾಥ ಬೆಳ್ಚಾಡ,ಕೆ.ಸದಾನಂದ ಶೆಟ್ಟಿ,ಜಯಶಂಕರ ಬಾಸ್ರಿತ್ತಾಯ,ರಮೇಶ್ ಸುವರ್ಣ,ಕುಸುಮ,ಕೆ.ಯೋಗೀಶ್ ಬೆಳ್ಚಾಡ,ದೇವಿಪ್ರಸಾದ್ ಪುಇಂಜಾ ಚಂದ್ರಹಾಸ, ಗಣೇಶಕಾರಂತ, ಗೀತಾ, ಹರೀಶ್ ಗಟ್ಟಿ, ಜಯಶೆಟ್ಟಿ ಮೊದಲಾದವರಿದ್ದರು.

More from the blog

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಲಕ್ಷ ಕುಂಕುಮಾರ್ಚನೆ..

ಪೊಳಲಿ: ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರಗಂಜಿಮಠ ಪುನರುತ್ಥಾನ ಶ್ರೀ ಮೃತ್ಯುಂಜಯೇಶ್ವರ ಶಿವ ಕ್ಷೇತ್ರ ಪುನರ್ ನಿರ್ಮಾಣದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದAತೆ ಜು.೮ರಂದು ಮಂಗಳವಾರ ಶ್ರೀ ಕ್ಷೇತ್ರ ಪೊಳಲಿ ಸಾವಿರ ಸೀಮೆಯ...

Protest : ಎಸ್.ಡಿ.ಪಿ‌.ಐ. ಪಕ್ಷದ ವತಿಯಿಂದ ಕೈಕಂಬದ ಬಳಿ ಬೃಹತ್ ಪ್ರತಿಭಟನೆ..

ಬಂಟ್ವಾಳ: ಅಬ್ದುಲ್ ರಹಿಮಾನ್ ಮತ್ತು ಅಶ್ರಫ್ ವಯನಾಡು ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸಿದ ಸರಕಾರದ ನಡೆಯನ್ನು ಖಂಡಿಸಿ, ನ್ಯಾಯ ಮರೀಚಿಕೆ...ಹುಸಿಯಾದ ಭರವಸೆ ಎಂಬ ಘೋಷ ವಾಕ್ಯದಲ್ಲಿ...