ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ , ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ವಿವಿಧ ಶಿಕ್ಷಕರ ಸಂಘ ಹಾಗೂ ನೌಕರರ ಸಂಘಟನೆಗಳ ವತಿಯಿಂದ, ‘ಕೊಟ್ಟರೆ ಅವಕಾಶ ಮುಟ್ಟುವೆವು ಆಕಾಶ’ ವಿಶೇಷ ಚೇತನ ಮಕ್ಕಳ ಹಬ್ಬ ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರ ಬಿ.ಸಿ.ರೋಡ್ ಇಲ್ಲಿ ನಡೆಯಿತು.

ಅಂತರಾಷ್ಟ್ರೀಯ ಚೆಸ್ ಕ್ರೀಡಾ ಪಟು ಕು.ಯಶಸ್ವಿನಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಶಾಸಕ ರಾಜೇಶ್ ನಾಯಕ್ ಮಾತನಾಡಿ ವಿಶಿಷ್ಟ ಮಕ್ಕಳಿಗೆ ಅವಕಾಶಗಳು ಸಿಕ್ಕಿದರೆ ಯಾವ ರೀತಿಯಲ್ಲಿ ಸಾಧನೆ ಮಾಡುತ್ತಾರೆ ಎಂಬುದಕ್ಕೆ ಕುಮಾರಿ ಯಶಸ್ವಿನಿಯೇ ಸಾಕ್ಷಿ. ಅವರಿಗೆ ಇನ್ನಷ್ಟು ಉತ್ತಮ ಅವಕಾಶಗಳ ವೇದಿಕಗಳನ್ನು ನೀಡುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ, ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಅವಕಾಶಗಳನ್ನು ನೀಡಿದಾಗ ಅವರು ಆಕಾಶ ಮುಟ್ಟುತ್ತಾರೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಜಿ. ಪಂ.ಸದಸ್ಯ ತುಂಗಪ್ಪ ಬಂಗೇರ, ಎಂ.ಎಸ್.ಮಹಮ್ಮದ್ ,ತಾ.ಪಂ.ಸದಸ್ಯ ರಾದ ಪ್ರಭಾಕರ ಪ್ರಭು, ಸಂಜೀವ ಪೂಜಾರಿ, ಡಯಾಟ್ ಸಂಸ್ಥೆ ಯ ಪ್ರಾಂಶುಪಾಲ ಸಿಪ್ರಿಂಯಾನ್ ಮೊಂತೆರೋ ಜೇಮ್ಸ್ ಸಂಸ್ಥೆಯ ಅಧಿಕಾರಿ ಕುಟಿನ್ಹೋ, ಪುರಸಭಾ ಮುಖ್ಯಾಧಿಕಾರಿ ರೇಖಾಶೆಟ್ಟಿ , ಶಿಕ್ಷಣ ಪರಿವೀಕ್ಷಣಾ ಧಿಕಾರಿ ರಘುನಾಥ್ , ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಸ್ಪರ್ಶಾ ಕಲಾಮಂದಿರದ ಮಾಲಕ ಸುಭಾಶ್ಚಂದ್ರ ಜೈನ್ , ಚುಟುಕು ಸಾಹಿತ್ಯ ಪರಿಷತ್ ಅದ್ಯಕ್ಷ ನೇಮು ಪೂಜಾರಿ ಇರಾ, ಸರಕಾರಿ ನೌಕರರ ವಿವಿಧ ಸಂಘಟನೆಗಳ ಅಧ್ಯಕ್ಷರುಗಳಾದ ಗಂಗಾದರ ರೈ, ಶಿವಪ್ರಸಾದ್, ರಮಾನಂದ, ಜೋಯೆಲ್ ಲೋಬೊ, ಜತ್ತಪ್ಪ, ಸುರೇಶ್, ಚಿನ್ನಪ್ಪ, ಸಂತೋಷ್, ಚೆನ್ನಕೇಶವ, ಮಹಮ್ಮದ್ ತುಂಬೆ, ರಾಜೇಶ್, ಶ್ರೀಮತಿ, ಅಖಿಲ್ ಶೆಟ್ಟಿ ಜಗದೀಶ್, ಬಾಳ್ತಿಲ, ಯುವ ಜನ ಸಬಲೀಕರಣಾಧಿಕಾರಿ ನವೀನ್ ಪಿ.ಎಸ್. ಶಾರದ ಪ್ರೌಡಶಾಲಾ ಸಂಚಾಲಕ ವೇದಮೂರ್ತಿ ಜನಾರ್ಧನಭಟ್ ಕಾರ್ಯಕ್ರಮ ಸಂಯೋಜಕಿ ಸುರೇಖಾ ಉಪಸ್ಥಿತರಿದ್ದರು.
ರಾಧಾಕ್ರಷ್ಣ ಭಟ್ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ಪೋಷಕರೊಂದಿಗೆ ಸಂತೋಷದ ಕ್ಷಣಗಳನ್ನು ಅನುಭವಿಸಲು ವಿವಿಧ ಖಾದ್ಯಗಳ ಸ್ಟಾಲುಗಳು, ವಿನೂತನ ರೀತಿಯ ವಿಶಿಷ್ಟ ರೀತಿಯ ಲ್ಲಿ ಕಾರ್ಯಕ್ರಮ ದ ಉದ್ಘಾಟನೆ, ವಿಶೇಷ ಚೇತನಮಕ್ಕಳಲ್ಲಿ ಅತ್ಯುನ್ನತ ಸಾಧನೆಗೈದ ಮಕ್ಕಳಿಗೆ ಗೌರವಾರ್ಪಣೆ, ವಿಶೇಷ ಚೇತನ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣ ಕ್ಕೆ ಸೂಕ್ತ ವೇದಿಕೆ ಮಕ್ಕಳಿಗೆ ವಿಶಿಷ್ಟ ಆಟಗಳ ಸರಣಿಗಳು, ವಿಶೇಷವಾಗಿ ಸ್ವಾಗತಿಸಿಲು ವಾದ್ಯವ್ರಂದ ಹಾಗೂ ಬೊಂಬೆಗಳ ಮೆರುಗು, ಕ್ಲೇ ಮಾಡಲಿಂಗ್, ವಿವಿಧ ರೀತಿಯ ಕ್ರಾಫ್ಟ್ ಗಳು, ವರ್ಣಮಯ ಚಿತ್ರಗಳ ರಚನೆಗೆ ಸೂಕ್ತ ವೇದಿಕೆ, ಕರಕುಶಲ ವಸ್ತುಗಳ ಪ್ರದರ್ಶನ , ಸಾಧಕರೊಂದಿಗೆ ಸಂವಾದ, ಸ್ಮರಣೀಯ ಆಟಿಕೆಗಳ ಸ್ಟಾಲುಗಳು, ನುರಿತರಿಂದ ಮಾಹಿತಿ ಗಳ ಮಹಾಪೂರ, ಮಾಯಲೋಕಕ್ಕೆ ಒಯ್ಯುವ ಜಾದೂ ಪ್ರದರ್ಶನ, ವಿಶೇಷ ವೇತನಮಕ್ಕಳು ಬರೆದ ಕವನ ಸಂಕಲನ ಬಿಡುಗಡೆ ನಡೆಯಿತು.
ಕವನಸಂಕಲನ ಬರೆದ ವಿಶಿಷ್ಟ ಮಕ್ಕಳಾದ ಕೌಶಿಕ್ ಕಂಚಿಕಾರ್ ಪೇಟೆ , ಭಾಗ್ಯಶ್ರೀ ಕುರಿಯಾಳ, ಸನ್ಮಾನ ಕಾರ್ಯಕ್ರಮ ಕೂಡ ನಡೆಯಿತು.
ವಿವಿಧ ರೀತಿಯ ಸಾಧನೆಗೈದ ವಿಶೇಷ ಚೇತನ ಮಕ್ಕಳಾದ ಚೆಸ್ ಕ್ರೀಡಾ ಪಟು ಯಶಸ್ವಿನಿ, ಚಂದ್ರಿಕಾ, ಶ್ರೀ ಕ್ರಷ್ಟ , ಮಹಮ್ಮದ್ ಜುನೈದ್, ಬಿ.ಪಾತಮ್ಮಾ ಸನ್ಮಾನ ಕಾರ್ಯಕ್ರಮ ಇದೇ ವೇದಿಕೆಯಲ್ಲಿ ನಡೆಯಿತು.
