ಬಂಟ್ವಾಳ: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 126 ಫಲಾನುಭವಿಗಳಿಗೆ ಗ್ಯಾಸ್ ವಿತರಣೆ ಕಾರ್ಯಕ್ರಮ ನಾವೂರ ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು.
ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ ಫಲಾನುಭವಿಗಳಿಗೆ ಗ್ಯಾಸ್ ವಿತರಸಿ ಮಾತನಾಡಿದ ಅವರು ಸರಕಾರದ ಜನಪರ ಕಾಳಜಿ ಯ ಯೋಜನೆ ಗಳು ಗ್ರಾಮದ ಜನರಿಗೆ ತಲುಪಲು ಅಧಿಕಾರಿಗಳು ಶ್ರಮ ವಹಿಬೇಕು, ಹಾಗಾದರೆ ಮಾತ್ರ ಗ್ರಾಮಗಳು ರಾಮರಾಜ್ಯವಾಗಲು ಸಾಧ್ಯ ಎಂದು ಅವರು ಹೇಳಿದರು.
ಮಹಿಳೆಯರ ಆರೋಗ್ಯ ದ ಮೇಲೆ ದುಷ್ಪರಿಣಾಮ ಗಳು ಬೀಳದಂತೆ ಪ್ರಧಾನಮಂತ್ರಿಯವರು ವಿಶೇಷ ಕಾಳಜಿಯಿಂದ ಈ ಯೋಜನೆ ಜಾರಿಗೆ ತಂದಿದ್ದಾರೆ , ಇಂತಹ ಯೋಜನೆಗಳ ಸಂಪೂರ್ಣ ಲಾಭ ಪಡೆಯಲು ಅವರು ತಿಳಿಸಿದರು.
ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ನಾವೂರ ಗ್ರಾ.ಪಂ.ಉಪಾಧ್ಯಕ್ಷ ವಿಜಯಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಜಕ್ರಿಬೆಟ್ಟು ಎಚ್.ಪಿ.ಗ್ಯಾಸ್ ಎಜೆನ್ಸಿ ಕರುಣಾಕರ ಶೆಟ್ಟಿ, ಗ್ರಾ.ಪಂ.ಸದಸ್ಯ ರಾದ ಜನಾರ್ಧನ, ಯೋಗೀಶ್, ಸದಾನಂದ, ರಾಜೀವಿ, ಶೀಲಾ, ಜಯಂತಿ ಮತ್ತಿತರ ರು ಉಪಸ್ಥಿತರಿದ್ದರು.
ಗ್ರಾ.ಪಂ.ಸದಸ್ಯ ಸದಾನಂದ ನಾವೂರ ಸ್ವಾಗತಿಸಿ , ಪಿಡಿ.ಒ ರಂಜನ್ ಕುಮಾರ್ ವಂದಿಸಿದರು.

