Thursday, January 29, 2026

ಬಂಟ್ವಾಳ ಪೇಟೆ ಸಂಪೂರ್ಣ ಸೀಲ್ ಡೌನ್ ಅಗಿದ್ದು ಇತಿಹಾಸದಲ್ಲಿ ಪ್ರಥಮ!

ಬಂಟ್ವಾಳ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಂಟ್ವಾಳದ ಬಂಗಾರ ಪೇಟೆ ಸೀಲ್ ಡೌನ್ ಅಗಿದೆ.
ಮಳೆಗಾಲದಲ್ಲಿ ನೆರೆ ಬಿಟ್ಟರೆ ಈ ರೀತಿಯಲ್ಲಿ ಸಂಪೂರ್ಣ ಬಂದ್ ಅಗಿರುವ ನಿದರ್ಶನಗಳೇ ಇಲ್ಲ ಅನ್ನುತ್ತಾರೆ ಹಿರಿಯರೊಬ್ಬರು.
ಬಂಟ್ವಾಳ ಪೇಟೆ ನಿವಾಸಿ ಮಹಿಳೆಯೋರ್ವರು ಕೊರೊನಾ ಪ್ರಕರಣದಿಂದ ಮೃತಪಟ್ಟ ಬಳಿಕ ಬಂಟ್ವಾಳ ಪೇಟೆ ಕಂಟೋನ್ಮೆಂಟ್ ಏರಿಯ ಅಂದರೆ ಅ ಮನೆಯ ಸುತ್ತಮುತ್ತಲಿನ 100 ಮೀ. ಪ್ರದೇಶ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆ ಏರಿಯಾದ ಮನೆಯವರು ಯಾರು ಕೂಡಾ ಮನೆಯಿಂದ ಹೊರಬರುವಂತಿಲ್ಲ. ಉಳಿದ ದಿನಗಳಲ್ಲಿ ಲಾಕ್ ಡೌನ್ ಅವಧಿಯಲ್ಲಿ ಬೆಳಿಗ್ಗೆ ದಿನ ಬಳಕೆಯ ವಸ್ತುಗಳ ಖರೀದಿಸಲು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶ ಇತ್ತು.

ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬಂಟ್ವಾಳ ಸಂಪೂರ್ಣ ಸ್ತಬ್ಧವಾಗಿದೆ. ನಿನ್ನೆ ಸಂಜೆಯಿಂದಲೇ ಅರ್ಥಾತ್‌ ಪೋಲೀಸರ ಅದೇಶ ಬರುವ ಮುಂಚೆಯೇ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು.
ಕೊರೊನಾ ಪಾಸಿಟಿವ್ ಗೆ ಮಹಿಳೆ ಬಲಿಯಾಗಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಬಂಟ್ವಾಳ ನಿಶಬ್ದವಾಗಿತ್ತು.

ಮುಂದಿನ ಆದೇಶದವರೆಗೂ ದಿನಬಳಕೆಯ ವಸ್ತಗಳಿಗೂ ಜನ ಪೇಟೆಗೆ ಬರುವಂತಿಲ್ಲ. ಅಧಿಕಾರಿಗಳು ಇವರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಸೀಲ್ ಡೌನ್ ಎಂಬ ಮಾಹಿತಿ ತಿಳಿಯುತ್ತಲೆ ಇಲ್ಲಿನ ನಿವಾಸಿಗಳಿಗೆ ಆತಂಕ ಶುರುವಾಗಿತ್ತು.

ಬಂಟ್ವಾಳ ಪೇಟೆಗೆ ಅಗಮಿಸಿವ ರಸ್ತೆಗಳಾದ ಬಸ್ತಿಪಡ್ಪು, ನೆರೆಪರಿಹಾರ ರಸ್ತೆ, ಜಕ್ರಿಬೆಟ್ಟು ಮತ್ತು ಬೈಪಾಸ್ ನಿಂದ ಪೇಟೆಗೆ ಜಂಕ್ಷನ್ ನಲ್ಲಿ ಪೋಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಜೊತೆಗೆ ಸ್ಥಳದಲ್ಲಿ ಪೋಲೀಸರನ್ನು ನಿಯೋಜಿಸಲಾಗಿದೆ. ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ಮುಂಜಾನೆಯಿಂದಲೇ ಪೇಟೆಯಲ್ಲಿ ತಿರುಗಾಟ ನಡೆಸುತ್ತಿದ್ದು, ಜನ ಮನೆಯಿಂದ ಹೊರಬರದಂತೆ ಕ್ರಮಕೈಗೊಂಡಿದ್ದಾರೆ.

ಸೀಲ್ ಡೌನ್ ಅಗಿದೆ ಮುಂದೇನು ಎಂಬ ಚಿಂತೆ ಪೇಟೆಯ ಜನರದ್ದು. ಅವಧಿ ಮುಗಿಯುವರೆಗೆ ಅಧಿಕಾರಿಗಳು ಯಾವ ರೀತಿಯಲ್ಲಿ ಮನೆಗಳಿಗೆ ದಿನಬಳಕೆಯ ವಸ್ತುಗಳ ಪೂರೈಕೆ ಗೆ ಅವಕಾಶ ಮಾಡುತ್ತಾರೆ ಎಂಬುದನ್ನು ಎದುರು ನೋಡುತ್ತಿದ್ದಾರೆ.

More from the blog

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...

ದೈವೀಕೃಪೆಯಿಂದ ಮಾತ್ರ ಜೀವನರಥ ಎಳೆಯಬಹುದು : ಒಡಿಯೂರುಶ್ರೀ

ವಿಟ್ಲ: ಆತ್ಮರೂಪಿ ಭಗವಂತ ದೇಹದೊಳಗಿರುವಾಗಲೇ ಬದುಕಿನ ಸಾರ್ಥಕತೆ ಪಡೆಯಬೇಕು. ಧರ್ಮದ ಬಗ್ಗೆ ಮನೆಯಿಂದಲೇ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಆಧ್ಯಾತ್ಮಿಕ ಬೆಳಕಿನಿಂದ ಮಾತ್ರ ರಾಷ್ಟ್ರ ಬೆಳಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ...