ಬಂಟ್ವಾಳ: ಅನಗತ್ಯ ಓಡಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಡ್ರೋನ್ ಚಿತ್ರೀಕರಣಕ್ಕೆ ಮುಂದಾಗಿದ್ದು, ಆದರೆ ಚಿತ್ರೀಕರಣ ನಡೆಸುವ ವ್ಯಕ್ತಿಯ ಕುರಿತು ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲನೆ ನಡೆಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಎಸ್ಪಿ ಲಕ್ಷ್ಮೀಪ್ರಸಾದ್ ಅವರಿಗೆ ತಿಳಿಸಿದ್ದಾರೆ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯಲ್ಲಿರುವ ಅನೇಕ ಧಾರ್ಮಿಕ ಹಾಗೂ ಶೈಕ್ಷಣಿಕ, ಡ್ಯಾಂ ಸಹಿತ ಅನೇಕ ಸ್ಥಳಗಳ ವಿಡಿಯೋ ದುರ್ಬಳಕೆ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ನನಗೆ ದೂರುಗಳು ಕೂಡಾ ಬಂದಿವೆ. ಉತ್ತಮ ವಿಚಾರಗಳಿಗೆ ನೀಡಿದ ಅವಕಾಶ ಜಿಲ್ಲೆಯಲ್ಲಿ ಅಶಾಂತಿವುಂಟಾಗಬಾರದು. ಅನುಮತಿ ನೀಡುವಾಗ ಪೂರ್ವಪರ ವಿಚಾರಗಳನ್ನು ಪಡೆದುಕೊಂಡು ಅನುಮತಿ ನೀಡಿ ಎಂದು ಅವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಬಂಟ್ವಾಳ: ವಿವಾದಾತ್ಮಕ ವ್ಯಕಿಗೆ ಡ್ರೋನ್ ಬಳಕೆ ಮಾಡಲು ಪೋಲೀಸ್ ಇಲಾಖೆ ಅನುಮತಿ ನೀಡಿದ್ದು ಸಾಕಷ್ಟು ವಿವಾದವುಂಟಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ.
ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ತಿರುಗಾಟ ಹಾಗೂ ಗುಂಪು ಸೇರಿದಂತೆ ಅನೇಕ ವಿಚಾರಗಳನ್ನು ತಡೆಯಲು ಎಸ್.ಪಿ.ಲಕ್ಮೀಪ್ರಸಾದ್ ಅವರು ಡ್ರೋನ್ ಕ್ಯಾಮರಾ ಬಳಸಿ ಅಮೂಲಕ ಪೋಲೀಸರ ಶ್ರಮವನ್ನು ಕಡಿಮೆ ಮಾಡಲು ಯೋಚನೆ ಹಾಕಿ, ಖಾಸಗಿ ವ್ಯಕ್ತಿಯೋರ್ವರಿಗೆ ಡ್ರೋನ್ ಬಳಕೆಗೆ ಅವಕಾಶ ನೀಡಿದ್ದರು.
ಆದರೆ ಆತ ವಿವಾದಾತ್ಮಕ ವ್ಯಕ್ತಿಯಾಗಿದ್ದು ವಿಡಿಯೋ ದುರ್ಬಳಕೆ ಮಾಡುವ ಅವಕಾಶಗಳು ಹೆಚ್ಚಾಗಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಅವಕಾಶವನ್ನು ಉಪಯೋಗಿಸಿಕೊಂಡು ಜಿಲ್ಲೆಯಲ್ಲಿನ ಕೆಲವು ಪ್ರಮುಖ ವಿಚಾರಗಳ ವಿಡಿಯೋ ಅಥವಾ ಸ್ಥಳ ಗಳ ದುರ್ಬಳಕೆ ಮಾಡುವ ಸಾದ್ಯತೆ ಗಳಿವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

