ಬಂಟ್ವಾಳ: ಕೊರೊನೊ ವೈರಸ್ ನ ಮುನ್ನೆಚ್ಚರಿಕೆ ವಹಿಸುವುದು ಮತ್ತು ತುರ್ತಾಗಿ ಗಮನ ಹರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸುವ ಉದ್ದೇಶದಿಂದ ತಾಲೂಕಿನ ಅಧಿಕಾರಿಗಳ ತುರ್ತು ಸಭೆಯನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್ ಅವರು ಬಿಸಿರೋಡಿನ ಮಿನಿವಿಧಾನ ಸೌಧದ ಕಚೇರಿ ಯಲ್ಲಿ ನಡೆಸಿದರು.










ಸಭೆಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರಾಮಗಳ ವಿಂಗಡನೆ ಮಾಡಿ ಅಲ್ಲಿನ ಜವಬ್ದಾರಿ ಯನ್ನು ಅವರಿಗೆ ವಹಸಲಾಗಿದೆ.
ತುರ್ತು ಸಂದರ್ಭದಲ್ಲಿ ಹಾಜರಿರುವುದು ಮತ್ತು ಸ್ಪಂದನೆ ನೀಡುವುದು ಹಾಗೂ ಸರಕಾರದ ಸೂಚನೆಗಳನ್ನು ಪಾಲಿಸಲು ಕ್ರಮಕೈಗೊಳ್ಳುವುದು ಮತ್ತು ಅವಶ್ಯ ವಸ್ತಗಳ ಅಂಗಡಿಗಳನ್ನು ಜಿಲ್ಲಾಡಳಿತ ನೀಡಿದ ಸಮಯಕ್ಕೆ ಸರಿಯಾಗಿ ಬಂದ್ ಮಾಡುವುದು , ವಿನಾಕಾರಣ ಮನೆಯಿಂದ ಯಾರು ಹೊರಬರದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಶೀಲ್ದಾರ್ ಅವರು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಜರಿದ್ದರು.












