ಬಂಟ್ವಾಳ: ದಕ್ಷಿಣ ಕನ್ನಡದಲ್ಲೂ ಸಂಪೂರ್ಣ ಲಾಕ್ ಡೌನ್ ಆಗಲಿ, ಯಾವುದೇ ವ್ಯಾಪಾರಸ್ಥರಿಗೂ ರಿಯಾಯಿತಿ ಕೊಡಬೇಡಿ, ಹೀಗೊಂದು ಬಲವಾದ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಕೊರೋನಾ ವೈರಸ್ ನ ಭೀತಿ ಹೆಚ್ಚಾಗುತ್ತಿರುವ ನಡುವೆ ರಾಜ್ಯ ಸರ್ಕಾರ, ಅಗತ್ಯ ವಸ್ತುಗಳಿಗೆ ವಿನಾಯಿತಿ ನೀಡಿ ಸಂಪೂರ್ಣ ಲಾಕ್ ಡೌನ್ ಗೆ ಆದೇಶ ನೀಡಿದೆ. ಆದರೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎನ್ನುವ ಕಾರಣಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ವರೆಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರದಿಡಲು ಜಿಲ್ಲಾಡಳಿತ ಆದೇಶ ನೀಡಿತ್ತು. ಇದನ್ನೇ ದುರುಪಯೋಗ ಪಡಿಸಿಕೊಂಡ ಸಾರ್ವಜನಿಕರು ತಾಲೂಕಿನ ಹಲವೆಡೆಗಳಲ್ಲಿ ಗುಂಪು ಗುಂಪಾಗಿ ತಿರುಗಾಡುತ್ತಿದ್ದ ದೃಶ್ಯ ಕಂಡುಬಂದಿದೆ.



ಬೆಳಿಗ್ಗೆ 6 ರಿಂದ ಮೀನು, ಮಾಂಸ, ಹೂ, ಹಾಲು, ತರಕಾರಿ ಅಂಗಡಿ, ದಿನಸಿ ಅಂಗಡಿಗಳು ತೆರೆದಿಡುವುದರಿಂದ ಜನರು ಪೇಟೆಗೆ ಅಗಮಿಸುತ್ತಾರೆ.
ಅಲ್ಲಿ ಒರ್ವ ಸೋಂಕಿತ ವ್ಯಕ್ತಿ ಇದ್ದರೂ ಅದು ಇಡೀ ತಾಲೂಕಿನ ಸ್ವಾಸ್ಥ್ಯ ಕೆಡಿಸಲು ಕಾರಣವಾಗಬಹುದು. ಈ ನಿಟ್ಟಿನಲ್ಲಿ ಒಂದು ವಾರಗಳ ಕಾಲ ಸಂಪೂರ್ಣ ಬಂದ್ ಮಾಡುವಂತೆ ತಾಲೂಕಿನ ಗೌರವಾನ್ವಿತ ವ್ಯಕ್ತಿಗಳ ಮನವಿಯಾಗಿದೆ. ಜಿಲ್ಲೆ ಸಂಪೂರ್ಣ ಲಾಕ್ ಡೌನ್ ಎಂಬ ಸರಕಾರದ ಆದೇಶವಿದ್ದರೂ, ಕೂಡಾ ಜಿಲ್ಲಾಡಳಿತ ಇ ಆದೇಶ ಗೊಂದಲಕ್ಕೆ ಕಾರಣವಾಗಿದೆ.
ಜಿಲ್ಲಾಡಳಿತ ಎಚ್ಚರ ವಹಿಸದೆ ಮುಂಜಾಗ್ರತೆ ಕೈಗೊಳ್ಳದಿದ್ದಲ್ಲಿ ಬಲುದೊಡ್ಡ ಬೆಲೆತೆರಬೇಕಾಗುತ್ತದೆ. ತಾಲೂಕು ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಜನದಟ್ಟಣೆ ಸೇರುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ನೀಡಲಾಗುತ್ತಿದ್ದರೂ, ಕೆಲವೊಂದು ರಿಕ್ಷಾಗಳು ತಿರುಗಾಟ ನಡೆಸುತ್ತಿದ್ದು, ಅನೇಕ ವ್ಯಕ್ತಿಗಳು ಅದೇಶವನ್ನು ಪಾಲಿಸದೆ ಅನಗತ್ಯವಾಗಿ ಬಿಸಿರೋಡು, ಬಂಟ್ವಾಳ ಪೇಟೆಯಲ್ಲಿ ತಾಲೂಕು ಆಡಳಿತ ಮತ್ತು ಪೋಲೀಸರ ಮನವಿಗೂ ಬೆಲೆ ಕೊಡದೆ ತಿರುಗುತ್ತಿದ್ದಾರೆ.
ಒಂದು ವಾರಗಳ ಕಾಲ ಬಂಟ್ವಾಳ ಸಂಪೂರ್ಣ ಲಾಕ್ ಡೌನ್ ಮಾಡಿ ತಾಲೂಕಿನ ಜನರ ಜೀವಕ್ಕೆ ಬೆಲೆ ನೀಡಿ ಎಂಬ ಕಳಕಳಿಯ ವಿನಂತಿಯ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.












