ಬಂಟ್ವಾಳ: ಕೊರೊನಾ ವೈರಸ್ ಜಾಗೃತಿಗಾಗಿ ಮತ್ತು ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸಭೆ ಸಮಾರಂಭ ಸಂತೆ ನಡೆಯಬಾರದು ಎಂದು ಅದೇಶ ಮಾಡಿದ್ದರು ಕೂಡಾ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಣಿ ಶನಿವಾರ ದ ಸಂತೆ ಯಾರ ಭಯವಿಲ್ಲದೆ ಬೆಳಿಗ್ಗೆ 6 ಗಂಟೆಯಿಂದ ಆರಾಮವಾಗಿ ನಡೆಯುತ್ತಿತ್ತು.
ಮಾಣಿಯಲ್ಲಿ ಶನಿವಾರದ ಸಂತೆ ನಡೆಯುತ್ತಿದೆ ಎಂಬ ಮಾಹಿತಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರಿಗೆ ಬಂದ ಹಿನ್ನೆಲೆಯಲ್ಲಿ ಕೂಡಲೇ ಸ್ಥಳಕ್ಕೆ ಧಾವಿಸಿದ ಅವರು ಸಂತೆ ನಿಲ್ಲಿಸುವಂತೆ ತಿಳಿಸಿದರು.

ಪ್ರತಿ ಶನಿವಾರ ದಿನದಂದು ಇಲ್ಲಿ ವಾರದ ಸಂತೆ ನಡೆಯುತ್ತಿದೆ. ಗ್ರಾಮ ಪಂಚಾಯತ್ ನ ಅಧೀನದಲ್ಲಿ ಟೆಂಡರ್ ಪಡೆದ ವ್ಯಕ್ತಿ ಶನಿವಾರದಂದು ಸಂತೆ ನಡೆಸುತ್ತಾರೆ. ಆದರೆ ಕೊರೊನೊ ಭೀತಿಯಿಂದ ಎಲ್ಲಾ ಸಭೆ ಸಮಾರಂಭಗಳ ಸಹಿತ ಸಂತೆಗಳ ಜಾತ್ರೋತ್ಸವ ನಿಲ್ಲಬೇಕು ಎಂದು ಸರಕಾರ ಆದೇಶ ಮಾಡಿದೆಯಾದರೂ ಇಲ್ಲಿ ಸಂತೆ ನಡೆಸುವ ವ್ಯಕ್ತಿಗೆ ಪಿಡಿಒ ತಿಳಿಸಿಲ್ಲ ಎಂದು ಆತ ಹೇಳಿ ಜವಬ್ದಾರಿ ಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾನೆ ಎಂದು ಮಾಹಿತಿ ತಿಳಿಸಿದೆ. ಸ್ಥಳಕ್ಕೆ ತಹಶೀಲ್ದಾರ್ ಜೊತೆ ಬೇಟಿ ನೀಡಿದ ವಿಟ್ಲ ಎಸ್.ಐ.ವಿನೋದ್ ರೆಡ್ಡಿ ಸಂತೆಯನ್ನು ನಿಲ್ಲಿಸಿ ವಾಪಾಸು ಕಳುಹಿಸಿದ್ದಾರೆ.

