ಬಂಟ್ವಾಳ: ಮಣಿಹಳ್ಳದ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಮತ್ತು ಎಳ್ಳು ಗಂಟು ದೀಪೋತ್ಸವ ಸಮಿತಿ ಪಣೆಕಲಪಡ್ಪು, ಮಣಿಹಳ್ಳ ಇವರ ಸಹಭಾಗಿತ್ವದಲ್ಲಿ 8ನೇ ವರ್ಷದ ಸಹಸ್ರ ಎಳ್ಳು ಗಂಟು ದೀಪೋತ್ಸವ ಮಾ.14 ರಂದು ಮಣಿಹಳ್ಳದ ಪಣೆಕಲಪಡ್ಪು ಮೈದಾನದಲ್ಲಿ ನಡೆಯಲಿದೆ.
ಮಾ.14 ರಂದು ಸಂಜೆ 7.30 ಕ್ಕೆ ಸಹಸ್ರ ಎಳ್ಳು ಗಂಟು ದೀಪೋತ್ಸವ ಪ್ರಾರಂಭವಾಗಲಿದ್ದು, ದೀಪೋತ್ಸವ ಕಾರ್ಯಕ್ರಮವನ್ನು ಉಡುಪಿಯ ಬನ್ನಂಜೆ ಮಠದ ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀ ಪಾದಂಗಳವರು ನೇರವೇರಿಸಲಿರುವರು ಎಂದು ಮಣಿಹಳ್ಳ ಹಿಂದೂ ಯುವ ಸೇನೆ ಏಕಲವ್ಯ ಶಾಖೆ ಹಾಗೂ ಪಣೆಕಲಪಡ್ಪು ಎಳ್ಳು ಗಂಟು ದೀಪೋತ್ಸವ ಸಮಿತಿಯ ಆಡಳಿತ ಮಂಡಳಿ ತಿಳಿಸಿದೆ.














