Monday, January 26, 2026

ಫೆ.7ಕ್ಕೆ ಕಜೆಕಾರಿನಲ್ಲಿ ವಿನೂತನ ಕಾರ್ಯಕ್ರಮ ’ಸೌಭಾಗ್ಯ ಸಂಭ್ರಮ’

ಬಂಟ್ವಾಳ: ಬಡ ಕುಟುಂಬದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ವಿವಾಹಯೋಗ್ಯ 10 ಹೆಣ್ಣು ಮಕ್ಕಳಿಗೆ ಆರ್ಥಿಕ ನೆರವು ನೀಡಲು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಮುಂದಾಗಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರ ಶುಭಾಶೀರ್ವದೊಂದಿಗೆ, ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮ ಪಂಚಾಯತ್ ಸದಸ್ಯ, ಅಂಬಡೆಮಾರು ಗಂಗಾಧರ ಪೂಜಾರಿ ಮತ್ತು ಕುಟುಂಬದ ವತಿಯಿಂದ ಸೌಭಾಗ್ಯ ಸಂಭ್ರಮ ಎಂಬ ಈ ಕಾರ್ಯಕ್ರಮ ಫೆ.೭ರಂದು ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಬೆಳಗ್ಗೆ ಧರ್ಮಸ್ಥಳ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಮಠಾಽಶ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿರುವರು.ಗ್ರಾ.ಪಂ.ಅಧ್ಯಕ್ಷ ವಜ್ರ ಪೂಜಾರಿ ಬಾರ್‍ದೊಟ್ಟು ಅವರು ಅಧ್ಯಕ್ಷತೆ ವಹಿಸಲಿರುವರು. ಮಡಂತ್ಯಾರು ಚರ್ಚ್ ಧರ್ಮಗುರು ವಂ| ಫಾ| ಬೇಸಿಲ್ ವಾಸ್, ಸಂಸದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಶಾಸಕರಾದ ಸುನಿಲ್ ಕುಮಾರ್, ಹರೀಶ್ ಪೂಂಜ, ತಹಶೀಲ್ದಾರ್ ರಶ್ಮಿ ಎಸ್.ಆರ್., ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕರಾದ ಕೆ. ವಸಂತ ಬಂಗೇರ,ಪ್ರಭಾಕರ ಬಂಗೇರ, ಜಿ.ಪಂ.ಸದಸ್ಯರಾದ ಬಿ.ಪದ್ಮಶೇಖರ ಜೈನ್, ಎಂ.ತುಂಗಪ್ಪ ಬಂಗೇರ, ಪಿಡಿಒ ಬಾಲಕೃಷ್ಣ ಪೂಜಾರಿ ಮತ್ತಿತರ ಗಣ್ಯರು ಭಾಗವಹಿಸಲಿರುವರು.
ಕಾರ್ಯಕ್ರಮದಲ್ಲಿ ಅವಿಭಕ್ತ ಕುಟುಂಬವೊಂದಕ್ಕೆ ಗೌರವಾರ್ಪಣೆ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ನಡೆಯಲಿದ್ದು, ಕಂಬಳ ಪೋಷಕ ಕಕ್ಯಪದವು ಪರಂಗಾಲು ದಿ. ವೆಂಕಪ್ಪ ಗೌಡ ಅವರ ಕುಟುಂಬಕ್ಕೆ ಗೌರವಾರ್ಪಣೆ ಮತ್ತು ಶ್ರೀ ಕ್ಷೇ.ಧ. ಗ್ರಾ.ಯೋಜನೆಯ 25 ವರ್ಷ ಪೂರೈಸಿದ 2 ಸಂಘಕ್ಕೆ, ಸುಧಾಕರ ಶೆಣೈ ಖಂಡಿಗ ದಂಪತಿಗೆ, ಸಂಜೀವ ಶೆಟ್ಟಿ ಬೆಳ್ತಂಗಡಿ, ಶ್ರೀ ಮಹಾದೇವ ದೇವೇಶ್ವರ ಭಜನ ಮಂಡಳಿಗೆ ಅಭಿನಂದನೆ, ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ಈಶ್ವರಮಂಗಳ ಅವರಿಗೆ ಸನ್ಮಾನ ನಡೆಯಲಿದೆ ಎಂದು ಸಂಘಟಕ ಗಂಗಾಧರ ಪೂಜಾರಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More from the blog

ಅಮ್ಮುoಜೆ : ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ..

ಬಂಟ್ವಾಳ : ಅಮ್ಮುoಜೆ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೊತ್ಸವವು ವಿಜೃಂಭಣೆಯಿಂದ ನಡೆಯಿತು. ಜ.25ರಂದು ಭಾನುವಾರ ಬಲಿ ಉತ್ಸವ ನಡೆಯಿತು. ಶ್ರೀಕ್ಷೇತ್ರ ಪೊಳಲಿಯ ಸುಬ್ರಮಣ್ಯ ತಂತ್ರಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆಯಿತು. ದೇವಳದ ಅರ್ಚಕ ನರೇಂದ್ರ ಭಟ್,...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...